

ಹನೂರು: ತಾಲೂಕಿನ ಗಡಿ ಭಾಗವಾದ ಗರಿಕೆಕಂಡಿ ಸಮೀಪ ನಡೆದ ಲಾರಿ ಅಪಘಾತದಲ್ಲಿ ಕೊಳ್ಳೇಗಾಲ ಮೂಲದ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊಬ್ಬ ಗಾಯಗೊಂಡಿದ್ದಾನೆ, ಎಂದು ತಿಳಿದು ಬಂದಿದೆ.
ಸಾವನ್ನಪ್ಪಿದ್ದ ವ್ಯಕ್ತಿ ಕೊಳ್ಳೇಗಾಲದ ನಿವಾಸಿ ಜಬಿವುಲ್ಲಾ (35) ಎನ್ನಲಾಗಿದೆ. ಮತ್ತೊಬ್ಬ ಕೊಳ್ಳೇಗಾಲ ನಿವಾಸಿ ಗಾಯಗೊಂಡು ರಾಮಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ತಮಿಳುನಾಡಿನಿಂದ ನಂಜನಗೂಡು ಕಡೆ ಪೇಪರ್ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ ಲಾರಿ ಗರಿಕೆ ಕಂಡಿ ಸಮೀಪ ಬುಧವಾರ ಬೆಳ್ಳಂಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿ ಸುಮಾರು 4 ಗಂಟೆ ಸಮಯದಲ್ಲಿ ಅಪಘಾತಕ್ಕೀಡಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ತಮಿಳುನಾಡು ನಾಡಿನ ಬರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.