ಗೂಡ್ಸ್ ವಾಹನ ಬೆಂಕಿಗಾಹುತಿ

13 HANUR 2
Published on

ಹನೂರು: ತಾಲೂಕಿನ ಅಜ್ಜೀಪುರ- ಹನೂರು ಮಾರ್ಗಮಧ್ಯೆ ಗುರುವಾರ ಗೂಡ್ಸ್ ವಾಹನದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಆಹುತಿಯಾಗಿದೆ.

ಕಾಂಚಳ್ಳಿ ಗ್ರಾಮದ ಸಿದ್ದೇಗೌಡ ಎಂಬುವರ ಗೂಡ್ಸ್ ವಾಹನ ಮಧ್ಯಾಹ್ನ 12.30ರಲ್ಲಿ ಕೈಮಗ್ಗದ ವಸ್ತುಗಳನ್ನು ತುಂಬಿಕೊಂಡು ಹನೂರಿನ ಕಡೆಗೆ ತೆರಳುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಇಂಜಿನ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಾಹನ ಆಹುತಿಯಾಗಿದೆ. ವಾಹನದಲ್ಲಿದ್ದ ಸಿದ್ದೇಗೌಡ ಮತ್ತು ಚಾಲಕ ರಾಜು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾಧಿಕಾರಿ ಪ್ರಶಾಂತ್ ನಾಯಕ್, ಸಿಬ್ಬಂದಿ ಜಯಶಂಕರ್, ಶೇಖರ್, ಪ್ರವೀಣ್ ಹಾಗೂ ನಾಗಪ್ಪ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net