ಕೋಳಿ ಅಂಗಡಿಯಲ್ಲಿ ಅಡಗಿದ್ದ ಹೆಬ್ಬಾವು ರಕ್ಷಣೆ

25 HANUR 2
Published on

ಹನೂರು: ತಾಲೂಕಿನ ಹೂಗ್ಯಂ ಗ್ರಾಮದ ಕೋಳಿ ಅಂಗಡಿಯಲ್ಲಿ ಭಾನುವಾರ ಅಡಗಿ ಕುಳಿತಿದ್ದ ಸುಮಾರು 8 ಅಡಿ ಉದ್ದದ ಹೆಬ್ಬಾವನ್ನು ಸೂಳೇರಿಪಾಳ್ಯ ಗ್ರಾಮದ ಉರುಗ ರಕ್ಷಕ ಸ್ನೇಕ್ ಜಭಿ ರಕ್ಷಿಸಿದ್ದಾರೆ.

ಗ್ರಾಮದ ಭಾಗ್ಯಾ ಎಂಬುವರ ಕೋಳಿ ಅಂಗಡಿಯಲ್ಲಿ ಹೆಬ್ಬಾವು ಅಡಗಿತ್ತು. ಇದನ್ನು ಗಮನಿಸಿದ ಭಾಗ್ಯಾ ಅವರು ಅಂಗಡಿಯಿಂದ ಹೊರಬಂದು ಜನರಿಗೆ ವಿಷಯ ತಿಳಿಸಿದ್ದು, ಸ್ನೇಕ್ ಜಭಿಗೆ ಮಾಹಿತಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಸ್ನೇಕ್ ಜಭಿ ಅವರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net