ಉದಯನಿಧಿ ಸ್ಟಾಲಿನ್ ವಿರುದ್ಧ ನಟ ಪ್ರಥಮ್ ಕಿಡಿ

PRATHAM
Published on

ಹನೂರು: ಸನಾತನ ಧರ್ಮದ ವಿರುದ್ಧ ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸಿರುವ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಚಿತ್ರನಟ ಪ್ರಥಮ್ ಕಿಡಿಕಾರಿದರು.
ಹನೂರಿನಲ್ಲಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಏನು ಹೇಳಿದ್ರೂ ಸರಿ ಅನ್ನೋ ಮನೋಭಾವ ಒಳ್ಳೆಯದಲ್ಲ. ಉಡಾಫೆ ಹೇಳಿಕೆಗಳಿಂದ ಇನ್ನೊಬ್ಬರ ಮನಸ್ಸಿಗೆ ನೋವಾಗುತ್ತದೆ ಎನ್ನುವ ಪರಿಕಲ್ಪನೆ ಇರಬೇಕು. ಅವರ ಹೇಳಿಕೆಯಿಂದ ಎಷ್ಟೋ ಜನರ ಭಾವನೆಗಳಿಗೆ ನೋವಾಗಿದೆ. ಇಷ್ಟವಿಲ್ಲದಿದ್ದರೆ ಧರ್ಮವನ್ನು ಪೂಜಿಸುವುದು ಬೇಡ. ಆದರೆ ತಾನು ಮಾತನಾಡಿದ್ದೇ ಸರಿ ಎನ್ನುವುದನ್ನು ಅವರು ಬಿಡಬೇಕು ಎಂದು ಅಸಮಾಧಾನ ಹೊರಹಾಕಿದರು.
ನವೆಂಬರ್‌ನಲ್ಲಿ ಮದುವೆ: ನ. 23 ಮತ್ತು 24 ರಂದು ಹಿರಿಯರು ನನಗೆ ವಿವಾಹ ನಿಶ್ಚಯಿಸಿದ್ದಾರೆ. ಮದುವೆಯನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಹನೂರು ಹಾಗೂ ಕೊಳ್ಳೇಗಾಲದ ಭಾಷಾ ಶೈಲಿಯಲ್ಲಿ ಚಿತ್ರೀಕರಿಸಿರುವ ‘ಕರ್ನಾಟಕ ಅಳಿಯ’ ಚಲನಚಿತ್ರ ನ. 4ರಂದು ಬಿಡುಗಡೆಯಾಗಲಿದೆ. ಅಪ್ಪು ಅವರು ಕೊನೆಯ ಬಾರಿ ಮೆಚ್ಚಿದ ಚಿತ್ರ ಇದಾಗಿದೆ. ಈ ಚಿತ್ರವನ್ನು ಚಿತ್ರಮಂದಿರಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net