ಬೈಕ್‌ಗಳು ಡಿಕ್ಕಿಯಾಗಿ ಸವಾರರಿಬ್ಬರಿಗೆ ಗಾಯ

Published on

ಹನೂರು: ತಾಲೂಕಿನ ಕೂತಗುಳಿ ಗ್ರಾಮ ಸಮೀಪದಲ್ಲಿ ಭಾನುವಾರ ಸಂಜೆ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ.

ತಾಲೂಕಿನ ದಿನ್ನಳ್ಳಿ ಗ್ರಾಮದ ಉಪೇಂದ್ರ (25) ಹಾಗೂ ನಿಂಭೇಶ್ (20) ಗಾಯಗೊಂಡವರು. ಈ ಇಬ್ಬರು ಸಂಜೆ 6.30ರಲ್ಲಿ ಕಾರ್ಯನಿಮಿತ್ತ ದಿನ್ನಳ್ಳಿ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಕೂತಗುಳಿ ಗ್ರಾಮ ಸಮೀಪದ ಅರಣ್ಯ ಪ್ರದೇಶದ ತಿರುವಿನಲ್ಲಿ ಎದುರಿಗೆ ಬಂದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಕಾಲು ಮುರಿತಕ್ಕೆ ಒಳಗಾಗಿ ತೀವ್ರ ಪೆಟ್ಟಾದ ಇಬ್ಬರನ್ನು ಸ್ಥಳೀಯರು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಇಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ರಾಮಾಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net