

ಹನೂರು: ಸಮೀಪದ ಹುಬ್ಬೆಹುಣಸೆ ಡ್ಯಾಂನಲ್ಲಿ ಶುಕ್ರವಾರ ನೀರು ಕುಡಿಯಲು ಹೋಗಿ ಕೆಸರಿಗೆ ಸಿಲುಕಿದ್ದ ಹಸುವನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದರು.
ಮಹಾಲಿಂಗನಕಟ್ಟೆ ಗ್ರಾಮದ ಸಿದ್ಧಾರ್ಥ ಎಂಬುವರಿಗೆ ಸೇರಿದ ಹಸು ಮಧ್ಯಾಹ್ನ ಮೇಯಲು ಹೋಗಿದ್ದಾಗ ನೀರನ್ನು ಕುಡಿಯಲು ಡ್ಯಾಂ ಬಳಿ ತೆರಳಿತ್ತು. ಈ ವೇಳೆ ಕೆಸರಿಗೆ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದರು. ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ಪ್ರಶಾಂತ್‌ನಾಯಕ್ ಹಾಗೂ ಸಿಬ್ಬಂದಿ ಹಸುವನ್ನು ರಕ್ಷಿಸಿ ವಾರಸುದಾರರಿಗೆ ಒಪ್ಪಿಸಿದರು.