ಪ್ರಪಂಚದ ಎಲ್ಲ ಭಾಷೆಗಳ ತಾಯಿ ಸಂಸ್ಕೃತ

21 HANUR 5
Published on

ಹನೂರು: ಸಂಸ್ಕೃತ ಪ್ರಪಂಚದ ಎಲ್ಲ ಭಾಷೆಗಳ ತಾಯಿಯಾಗಿದ್ದು, ತನ್ನದೇಯಾದ ಐತಿಹಾಸಿಕ ಹಿನ್ನಲೆಯನ್ನು ಒಳಗೊಂಡಿದೆ ಎಂದು ಸಾಲೂರು ಬೃಹನ್ಮಾಠಧ್ಯಕ್ಷ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಶನಿವಾರ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತ ಪಾಠಾಶಾಲೆಯಿಂದ ಆಯೋಜಿಸಿದ್ಧ ಆಸ್ಮಾಕಂ ಸಂಸ್ಕೃತಂ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಸ್ಕೃತ ಪ್ರಾಚೀನ ಭಾರತೀಯ ಭಾಷೆಯಾಗಿದ್ದು, ದೇವವಾಣಿ ಎಂದು ಕರೆಯಲಾಗುತ್ತದೆ. ಈ ಭಾಷೆಯು ಸರಳ ಮತ್ತು ಸುಸಂಬಂಧವಾಗಿದ್ದು, ಪ್ರತಿಯೊಬ್ಬರೂ ಕಲಿಯಬಹುದಾಗಿದೆ. ಸಂಸ್ಕೃತ ಭಾಷಾ ಕಲಿಕೆಯಿಂದ ಜ್ಞಾನಾರ್ಜನೆ ವೃದ್ಧಿಸುತ್ತದೆ. ವಿಚಾರವಂತಿಕೆ ಬೆಳೆಯುತ್ತದೆ. ಶಿಸ್ತುಬದ್ಧತೆಯನ್ನು ಕಲಿಸುವುದರ ಜತೆಗೆ ಸಂಸ್ಕಾರಯುತ ಜೀವನಕ್ಕೆ ಸಹಕಾರಿಯಾಗಿದೆ. ಆದರೆ ಈ ಭಾಗದಲ್ಲಿ ಸಂಸ್ಕೃತ ಕಲಿಯುವವರ ಸಂಖ್ಯೆ ಕಡಿಮೆ. ಆದ್ದರಿಂದ ಪ್ರತಿಯೊಬ್ಬರೂ ಸಂಸ್ಕೃತ ಭಾಷಾ ಕಲಿಕೆಗೆ ಗಮನಹರಿಸಬೇಕು. ಇದರಿಂದ ಸುಸಂಬದ್ಧ ಬದುಕನ್ನು ರೂಪಿಸಿಕೊಳ್ಳಬಹುದು. ಈ ದಿಸೆಯಲ್ಲಿ ಮಠದ ವತಿಯಿಂದ ಸಂಸ್ಕೃತ ಪಾಠಶಾಲೆಯನ್ನು ತೆರೆಯಲಾಗಿದ್ದು, ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗುಂಡೇಗಾಲದ ಮಲ್ಲಿಕಾರ್ಜುನ ಸ್ವಾಮೀಜಿ, ಮುಖ್ಯ ಶಿಕ್ಷಕ ಮಹಾದೇವ, ಮುಖಂಡರಾದ ಶಿವಕುಮಾರಸ್ವಾಮಿ, ಕೆಂಪಸಿದ್ದು, ವೀರಣ್ಣ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net