

ಹನೂರು: ಸದ್ಭಾವನಾ ದಿನಾಚರಣೆ ಅಂಗವಾಗಿ ತಾಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಭಾನುವಾರ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಳಿಕ ಮಾತನಾಡಿ, ಎಲ್ಲ ಧರ್ಮ, ಭಾಷೆ ಹಾಗೂ ಜನರಲ್ಲಿ ಸೌಹಾರ್ದತೆ ಉತ್ತೇಜಿಸುವುದರ ಜತೆಗೆ ಹಿಂಸಾಚಾರವನ್ನು ತ್ಯಜಿಸುವಂತೆ ಮಾಡುವುದು ಸದ್ಭಾವನಾ ದಿನದ ಉದ್ದೇಶ. ಕೇಂದ್ರ ಸರ್ಕಾರದ ಆದೇಶದಂತೆ ಪ್ರತಿ ವರ್ಷ ಆ.20 ರಂದು ಸದ್ಭಾವನಾ ದಿನ ಆಚರಿಸಲಾ ಗುತ್ತದೆ. ಆದ್ದರಿಂದ ಎಲ್ಲರೂ ಸೌಹರ್ದತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಎಎಸೈಗಳಾದ ಲಿಂಗರಾಜು, ಗೋಪಾಲ್, ಮುಖ್ಯ ಪೇದೆಗಳಾದ ಗಿರೀಶ್, ಸಿದ್ದೇಶ್, ಮಂಜು ಹಾಗೂ ಸಿಬ್ಬಂದಿ ಇದ್ದರು.