ಮದ್ಯದ ಪೌಚ್‌ಗಳ ವಶ

Crime Logo
Published on

ಹನೂರು: ತಾಲೂಕಿನ ನಕ್ಕುಂದಿ ಗ್ರಾಮದ ಗೋವಿಂದ ಎಂಬುವವರ ಅಂಗಡಿಯ ಮುಂಭಾಗ ಹೂಗ್ಯಂ-ಮಿಣ್ಯಂ ಮುಖ್ಯ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ 399.7 ರೂ. ಮೌಲ್ಯದ 10 ಮದ್ಯದ ಪೌಚ್‌ಗಳನ್ನು ಇತ್ತೀಚೆಗೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಯಳಂದೂರು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಹನಮಂತ ಉಪ್ಪಾರ್ ಅವರಿಗೆ ದೊರೆತ ಮಾಹಿತಿ ಮೇರೆಗೆ ಸೆ.3ರಂದು ಬೆಳಗ್ಗೆ 12.20 ಗಂಟೆ ಸಮಯದಲ್ಲಿ ಹೊನ್ನೂರು ಗ್ರಾಮದ ಪರಿಶಿಷ್ಟ ಜನಾಂಗದ ಬೀದಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ವ್ಯಕ್ತಿಯ ಬಳಿ ಇದ್ದ 839.37 ರೂ. ಮೌಲ್ಯದ 90 ಎಂ.ಎಲ್.ನ 21 ಮದ್ಯದ ಪೌಚ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.

ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಪೋಲೀಸ್ ಇನ್ಸ್‌ಪೆಕ್ಟರ್ ದಿವಾಕರ, ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಪ್ರದೀಪ್, ಲಿಂಗರಾಜು, ಶ್ರೀನಿವಾಸಮೂರ್ತಿ ಸಹಯೋಗದೊಂದಿಗೆ ಸೆ.3ರಂದು ಬೆಳಗ್ಗೆ 11.30 ಗಂಟೆ ಸಮಯದಲ್ಲಿ ಸಿದ್ದಯ್ಯನಪುರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತ್ತಿದ್ದ ವ್ಯಕ್ತಿಯ ಬಳಿ 90 ಮಿಲಿಯ 15 ಪೌಚ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net