ಸಾಕು ನಾಯಿ ಹೊತ್ತೊಯ್ದ ಚಿರತೆ

Published on

ಹನೂರು: ತಾಲೂಕಿನ ಒಡೆಯರಪಾಳ್ಯ ಸಮೀಪದ ಬಸವನಗುಡಿಯ ಜಮೀನಿನಲ್ಲಿ ವಾಸವಿದ್ದ ರಾಜೇಂದ್ರನ್ ಎಂಬುವರ ಸಾಕು ನಾಯಿಯನ್ನು ಬುಧವಾರ ಚಿರತೆ ಹೊತ್ತೊಯ್ದಿದೆ.

ರಾಜೇಂದ್ರನ್ ಮೂರು ನಾಯಿಗಳನ್ನು ಸಾಕಿದ್ದು, ಈ ಪೈಕಿ ಮನೆಯ ಮುಂಭಾಗ ಮಲಗಿದ್ದ ಒಂದು ನಾಯಿಯನ್ನು ಚಿರತೆ ಹೊತ್ತೊಯ್ದಿದೆ. ಉಳಿದ ನಾಯಿಗಳ ಕೂಗಾಟ ಕೇಳಿ ಮನೆಯಿಂದ ಹೊರಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಕ್ರಮವಹಿಸಬೇಕು ಎಂದು ರಾಜೇಂದ್ರನ್ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net