ಹೃದಯಾಘಾತದಿಂದ ಯೋಧ ಮೃತ

GNANA PRAKASH
Published on

ಹನೂರು: ಪಂಜಾಬ್ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳವಾಡಿ ಗ್ರಾಮದ ಯೋಧ ಶುಕ್ರವಾರ ಹೃದಯಾಘಾತದಿಂದ ನಿಧನರಾದರು.

ಸುಳವಾಡಿ ಗ್ರಾಮದ ಅಂತೋಣಿಸ್ವಾಮಿ ಹಾಗೂ ಅಂತೋಣಿಯಮ್ಮಳ್ ಎಂಬುವರ ಪುತ್ರ ಜ್ಞಾನ ಪ್ರಕಾಶ್ (33) ಮೃತರು. 13 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ತಂದೆ, ತಾಯಿ, ಪತ್ನಿ ಹಾಗೂ ಪುತ್ರ ಇದ್ದಾರೆ. ಸುದ್ದಿ ತಿಳಿದು ಕುಟುಂಬಸ್ಥರು ಪಂಜಾಬ್‌ಗೆ ತೆರಳಿದ್ದಾರೆ. ಯೋಧರ ಮೃತ ದೇಹ ಶನಿವಾರ ಸ್ವ ಗ್ರಾಮಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net