ಮನೆ ಮೇಲೆ ಮರ ಬಿದ್ದು ಹಾನಿ

oppo_2
oppo_2
Published on

ಹನೂರು: ತಾಲೂಕಿನ ಮಂಗಲ ಗ್ರಾಮದಲ್ಲಿ ಸೋಮವಾರ ಸಂಜೆ ಸುರಿದ ಗಾಳಿ ಸಹಿತ ಜೋರು ಮಳೆಗೆ ಮರ ಮನೆಯ ಮೇಲೆ ಬಿದ್ದು ಹಾನಿ ಉಂಟಾಗಿದೆ.

ಗ್ರಾಮದಲ್ಲಿ ಸಂಜೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಜೋರು ಮಳೆ ಸುರಿದಿದ್ದು, ಹೊಸ ಬಡಾವಣೆಯ ಮಲ್ಲಿಕಾರ್ಜುನ ಎಂಬುವರ ಮನೆಯ ಮೇಲೆ ಮರ ಬಿದ್ದ ಪರಿಣಾಮ ಛಾವಣಿ ಹಾಗೂ ಗೋಡೆ ಕುಸಿದಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ಮಲ್ಲಿಕಾರ್ಜುನ ಮತ್ತು ಕುಟುಂಬಸ್ಥರು ಸಮೀಪದ ಮನೆಯಲ್ಲಿ ಇದ್ದುದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net