

ಹನೂರು: ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಬುಧವಾರ ಚಿರತೆ ದಾಳಿಗೆ 2 ಮೇಕೆಗಳು ಮೃತಪಟ್ಟಿವೆ. ಬಸಪ್ಪನದೊಡ್ಡಿ ಗ್ರಾಮದ ರಮೇಶ್ ಅವರು ಮಧ್ಯಾಹ್ನ 2 ಗಂಟೆಯಲ್ಲಿ ಗಂಗನದೊಡ್ಡಿ ಗ್ರಾಮದ ಪುಟ್ಟಸ್ವಾಮಿ ಅವರ ಜಮೀನಿನಲ್ಲಿ ಕುರಿ ಮಂದೆಯನ್ನು ಬಿಟ್ಟು ವಿಶ್ರಾಂತಿ ಪಡೆಯುತ್ತಿದ್ದರು. '
ಈ ವೇಳೆ ಮೇಕೆಗಳ ಚೀರಾಟ ಕೇಳಿ ಸ್ಥಳಾಗಕ್ಕಮಿಸಿದಾಗ ಚಿರತೆ ಅಲ್ಲಿಂದ ಓಟ ಕಿತ್ತಿತ್ತು. ಬಳಿಕ ಕುರಿ ಮಂದೆಯನ್ನು ವೀಕ್ಷಿಸಿದಾಗ 2 ಮೇಕೆಗಳು ಚಿರತೆ ದಾಳಿಗೆ ಮೃತಪಟ್ಟಿದ್ದವು. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಮಾಲೀಕ ರಮೇಶ್ ಒತ್ತಾಯಿಸಿದ್ದಾರೆ. ಚಿರತೆ ಹಾವಳಿ ತಡೆಗಟ್ಟುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.