7ರಂದು ಬಾಲ್ಯವಿವಾಹ ತಡೆ ಜನಜಾಗೃತಿ

GOWDE GOWDA
Published on

ಹನೂರು: ಪುದು ರಾಮಾಪುರ ಗ್ರಾಮದಲ್ಲಿ ಆ.7ರಂದು ರೈತ ಸಂಘದಿಂದ ಆಯೋಜಿಸಿರುವ ಬಾಲ್ಯ ವಿವಾಹ ತಡೆ ಜನಜಾಗೃತಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ತಿಳಿಸಿದರು.

ಬಾಲ್ಯವಿವಾಹ ಅಪರಾಧವಾಗಿದ್ದು, ಸಂಬಂಧಪಟ್ಟವರು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದರೆ, ಈ ಬಗ್ಗೆ ತಿಳಿದಿದ್ದರೂ ಕೆಲ ಪಾಲಕರು ತಮ್ಮ ಜವಾಬ್ದಾರಿಯಿಂದ ಮುಕ್ತಿ ಹೊಂದಲು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ದೂಡುತ್ತಿದ್ದಾರೆ. ಇಂತಹ ಪ್ರಕರಣಗಳು ಹನೂರು ಭಾಗದಲ್ಲಿ ಹೆಚ್ಚಾಗುತ್ತಿರುವುದು ದುರದೃಷ್ಟಕರ. ರಕ್ತದಾನ ಶ್ರೇಷ್ಠವಾದದ್ದು. ಇದರಿಂದ ಆರೋಗ್ಯ ವೃದ್ಧಿಸುತ್ತದೆ. ತುರ್ತು ಸಂದರ್ಭದಲ್ಲಿ ಇತರರ ಜೀವ ಉಳಿಸಲು ಸಹಕಾರಿಯಾಗಿದೆ. ಹಾಗಾಗಿ ಇದನ್ನು ಮನಗಂಡು ಪುದು ರಾಮಾಪುರ ರೈತ ಸಂಘದ ಗ್ರಾಮ ಘಟಕದ 2ನೇ ವಾರ್ಷಿಕೋತ್ಸವದ ಅಂಗವಾಗಿ ಬಾಲ್ಯವಿವಾಹ ತಡೆ ಜನಜಾಗೃತಿ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ತಿಳಿಸಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶೆ ಎಂ.ಎಲ್.ನಂದಿನಿ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಎಸ್ಪಿ ಡಾ.ಟಿ.ಬಿ.ಕವಿತಾ, ಜಿಪಂ ಸಿಇಒ ಮೊನಾರೋತ್, ಎಸಿ ಮಹೇಶ್, ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ಮಹೇಶ್ ಭಾಗವಹಿಸಲಿದ್ದಾರೆ ಎಂದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ತಾಲೂಕು ಅಧ್ಯಕ್ಷ ಅಮ್ಜದ್‌ಖಾನ್, ಗ್ರಾಮ ಘಟಕದ ಅಧ್ಯಕ್ಷ ವೇಲುಸ್ವಾಮಿ, ಪದಾಧಿಕಾರಿಗಳಾದ ಬಸವಣ್ಣ, ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net