ವಿದ್ಯುತ್ ಪೂರೈಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ಎಚ್ಚರಿಕೆ

22 HANUR 4
Published on

ಹನೂರು: ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿದ್ದಲ್ಲಿ ಸೆಸ್ಕ್ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ತಾಲೂಕಿನ ದಂಟಳ್ಳಿ ಗ್ರಾಮಸ್ಥರು ಎಚ್ಚರಿಸಿದರು.

ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿಗೆ ತಾಲೂಕಿನ ದಂಟಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಮನವಿ ಸಲ್ಲಿಸಲು ಶನಿವಾರ ಮಧ್ಯಾಹ್ನ ತೆರಳಿದ್ದರು. 4ನೇ ಶನಿವಾರ ರಜೆಯ ಕಾರಣ ಅಧಿಕಾರಿಗಳು ಇರಲಿಲ್ಲ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಗ್ರಾಮವು ಅರಣ್ಯದಂಚಿನಲ್ಲಿದೆ. ಆದರೆ, ವಿದ್ಯುತ್ ಕೇಬಲ್‌ಗಳು ದುರಸ್ತಿಗೊಂಡಿರುವ ಪರಿಣಾಮ ಕಳೆದ 8 ತಿಂಗಳಿನಿಂದ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರಾತ್ರಿ ವೇಳೆ ಕತ್ತಲೆಯಿಂದ ದಿನ ದೂಡುವಂತಾಗಿದೆ. ಇತ್ತ ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುತ್ತಾ ಬಂದರೂ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನೆರೆಡು ದಿನದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಹೇಳಿದರು.

ಗ್ರಾಮಸ್ಥರಾದ ಮಹದೇವಸ್ವಾಮಿ, ವೆಂಕಟೇಗೌಡ, ಶಿವಣ್ಣ, ಮಹದೇವಪ್ಪ, ಸಿದ್ದಪ್ಪ, ಶಿವಪ್ಪ, ಸಿದ್ದಮಲ್ಲಪ್ಪ, ಜಾಲಪ್ಪ ನಂದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net