ವಡಕೆಹಳ್ಳದಲ್ಲಿ ದೇಗುಲ ನಿರ್ಮಾಣಕ್ಕೆ ಚಾಲನೆ

Published on

ಹನೂರು: ತಾಲೂಕಿನ ವಡಕೆಹಳ್ಳ ಗ್ರಾಮದಲ್ಲಿ ಭಾನುವಾರ ಓಂ ಶಕ್ತಿ ದೇಗುಲ ನಿರ್ಮಾಣಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಭೂಮಿಪೂಜೆ ನೆರವೇರಿಸಿದರು.

ದೇಗುಲಗಳು ನೆಮ್ಮದಿ ನೀಡುವ ಧಾರ್ಮಿಕ ತಾಣಗಳು. ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಲು ಇವು ಸಹಕಾರಿಯಾಗಿವೆ ಎಂದರು. ದೇಗುಲವನ್ನು ಸಾಂಪ್ರದಾಯಿಕವಾಗಿ ನಿರ್ಮಿಸಿಕೊಂಡು ಪೂಜಾದಿಗಳನ್ನು ನೆರವೇರಿಸುವ ಮೂಲಕ ಶಾಂತಿ ಕಂಡುಕೊಳ್ಳಬೇಕು. ಶ್ರದ್ಧಾಕೇಂದ್ರಗಳಲ್ಲಿ ಹಬ್ಬ, ಹರಿದಿನಗಳನ್ನು ಆಚರಿಸಿ ಬಾಂಧವ್ಯವನ್ನು ವೃದ್ಧಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಮುಖಂಡರಾದ ವಿಜಯಕುಮಾರ್, ಮಹಾದೇವ, ಮಂಜೇಶ್ ಮಾತನಾಡಿದರು. ವಿವಿಧ ಸಂಘ, ಸಂಸ್ಥೆ ಮುಖ್ಯಸ್ಥರಾದ ಡಿ.ಕೆ ರಾಜು, ಜಗದೀಶ, ಗಣೇಶ್, ತಂಗವೇಲು, ಚಿನ್ನರಾಜು, ಮಾಧುರಾಜು, ಆರ್ಮುಗಂ, ಗೋವಿಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net