ಹುತ್ತೂರು ಸರ್ಕಾರಿ ಶಾಲೆಯ ಮಾದೇಶ್ ಅಧ್ಯಕ್ಷ

MADESH
Published on

ಹನೂರು: ತಾಲೂಕು ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಹುತ್ತೂರು ಸರ್ಕಾರಿ ಶಾಲೆಯ ಸಿ. ಮಾದೇಶ್ ಹಾಗೂ ಪದಾಧಿಕಾರಿಗಳನ್ನು ಶನಿವಾರ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಪಟ್ಟಣದ ಗೌತಮ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾಗಿ ಬಿಎಂಜಿ ಸರ್ಕಾರಿ ಪ್ರೌಢಶಾಲೆಯ ಚಂದ್ರಶೇಖರಯ್ಯ, ಉಪಾಧ್ಯಕ್ಷರಾಗಿ ಆರ್.ಎಸ್. ದೊಡ್ಡಿ ಶಾಲೆಯ ಶಿವರಾಜಮ್ಮ, ಕಾರ್ಯದರ್ಶಿ ಸ್ವಾಮಿ, ಖಜಾಂಚಿ ಅಜ್ಜೀಪುರ ಶಾಲೆಯ ನಂಜುಂಡಯ್ಯ, ಸಹ ಕಾರ್ಯದರ್ಶಿ ಹಾವಿನಮೂಲೆ ಶಾಲೆಯ ಪ್ರಶಾಂತ್, ಸಂಘಟನಾ ಕಾರ್ಯದರ್ಶಿಯಾಗಿ ರಾಮಾಪುರ ಶಾಲೆಯ ಕೆಂಚಪ್ಪ ಹಾಗೂ ನಿರ್ದೇಶಕರಾಗಿ ಮಹಾದೇವಮ್ಮ, ಶಿವಕುಮಾರಿ, ಅನಿಲ್, ಲಿಂಗಯ್ಯ, ವಿಜಯಕುಮಾರ್, ರಮೇಶ್, ರಾಜು, ನಟೇಶ್, ಶಿವಕುಮಾರ್, ಸುಂದರ್, ಚಿಕ್ಕಸ್ವಾಮಿ, ರವೀಂದ್ರ, ಮಧುಸೂದನ್, ಮಹದೇವು ಹಾಗೂ ಸಾವುಕರಾಜು ಅವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ ನಿವೃತ್ತಿಯಾದ ಒಡೆಯರಪಾಳ್ಯ ಶಾಲೆಯ ಕೆ. ಬಾಬು, ಚಿಂಚಳ್ಳಿ ಶಾಲೆಯ ರಾಜಮ್ಮ ಹಾಗೂ ಚೆನ್ನಾಲಿಂಗನಹಳ್ಳಿ ಶಾಲೆಯ ಶಾಂತಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net