ಬಾಕಿ ಬಾಡಿಗೆ ಪಾವತಿಗೆ ಸೂಚನೆ

01 HANUR 4
Published on

ಹನೂರು: ಒಂದು ವಾರದೊಳಗೆ ಕನಿಷ್ಠ 5 ತಿಂಗಳ ಬಾಡಿಗೆ ಹಣ ಪಾವತಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮಳಿಗೆದಾರರಿಗೆ ಸೂಚಿಸಿದರು.

ಪಪಂ ವತಿಯಿಂದ ನಿರ್ಮಿಸಲಾಗಿರುವ ಮಳಿಗೆಗಳಲ್ಲಿ ಬಾಡಿಗೆ ವಸೂಲಾಗದ ಹಿನ್ನೆಲೆಯಲ್ಲಿ ಸೋಮವಾರ ಕರೆದಿದ್ದ ಮಳಿಗೆದಾರರ ಸಭೆಯಲ್ಲಿ ಅವರು ಮಾತನಾಡಿ, ಅಂಗಡಿಗಳನ್ನು ಬಾಡಿಗೆ ಪಡೆದು ಹಲವು ವರ್ಷಗಳಾಗಿವೆ. ಆದರೆ ಬಹುತೇಕರು ಸಮರ್ಪಕವಾಗಿ ಬಾಡಿಗೆ ಪಾವತಿಸಿಲ್ಲ. ಆದ್ದರಿಂದ ಪ್ರತಿ ತಿಂಗಳು ಬಾಡಿಗೆ ಪಾವತಿಸಬೇಕು. ಸಮಸ್ಯೆಗಳೇನಾದರೂ ಇದ್ದಲ್ಲಿ ಬಗೆಹರಿಸುವುದಾಗಿ ತಿಳಿಸಿದರು.

ಈ ವೇಳೆ ಕೆಲ ಮಳಿಗೆದಾರರು ಮಾತನಾಡಿ, ಬಾಡಿಗೆ ಪಾವತಿಸಲು ಸಿದ್ಧರಿದ್ದೇವೆ. ಆದರೆ ಈಗಾಗಲೇ ಪಾವತಿಸಿರುವ ಬಾಡಿಗೆ ಹಣದ ರಶೀದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪುಸ್ತಕದಲ್ಲಿ ನಮೂದಿಸಿಲ್ಲ. ಇದರಿಂದ ನಾವು ಕಟ್ಟಿರುವ ಹಣ ಹಾಗೂ ಇರುವ ಬಾಕಿ ಮೊತ್ತದಲ್ಲಿ ವ್ಯತ್ಯಾಸವಿದೆ. ಹಾಗಾಗಿ ಈ ಸಮಸ್ಯೆಯನ್ನು ಬಗೆಹರಿಸಿದರೆ ಪ್ರತಿ ತಿಂಗಳು ಬಾಡಿಗೆ ಪಾವತಿಸಲಾಗುವುದು. ಸದ್ಯಕ್ಕೆ ಒಂದು ವಾರದೊಳಗೆ 2 ತಿಂಗಳ ಬಾಡಿಗೆ ಹಣವನ್ನು ಪಾವತಿಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಮುಖ್ಯಾಧಿಕಾರಿ ಒಪ್ಪಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net