ಹನೂರು ಎಚ್‌ಸಿಸಿ ತಂಡ ಗೆಲುವು

24 HANUR 3
Published on

ಹನೂರು: ತಾಲೂಕಿನ ಮಣಗಳ್ಳಿ ಗ್ರಾಮದಲ್ಲಿ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕನಕದಾಸ ಜಯಂತಿ ಅಂಗವಾಗಿ 3 ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹನೂರಿನ ಎಚ್‌ಸಿಸಿ ತಂಡ ಜಯ ಗಳಿಸಿದೆ.

ಮಣಗಳ್ಳಿ ಕ್ರಿಕೆಟರ್ಸ್‌ ವತಿಯಿಂದ ಜೂ.21ರಿಂದ 23ರವರೆಗೆ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಹನೂರು ಸೇರಿದಂತೆ ಕೌದಳ್ಳಿ, ಬಂಡಳ್ಳಿ, ಮಣಗಳ್ಳಿ, ಕೊಳ್ಳೇಗಾಲ ಹಾಗೂ ಇತರ ಕಡೆಗಳಿಂದ ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಮಣಗಳ್ಳಿ ಕ್ರಿಕೆಟರ್ಸ್‌ ತಂಡದಲ್ಲಿ ಮೈಸೂರು, ಬೆಂಗಳೂರು ಹಾಗೂ ಚಾ.ನಗರದ ಕೆಲ ಕ್ರಿಕೆಟಿಗರು ಭಾಗವಹಿಸಿದ್ದು ಗಮನಾರ್ಹವಾಗಿತ್ತು.

ಫೈನಲ್ ಪಂದ್ಯಾವಳಿಯಲ್ಲಿ ಮಣಗಳ್ಳಿ ಕ್ರಿಕೆಟರ್ಸ್‌ ತಂಡ ನಿಗದಿತ 4 ಓವರ್‌ಗೆ 23 ರನ್ ಗಳಿಸಿದರೆ, ಹನೂರು ಎಚ್‌ಸಿಸಿ ತಂಡ 3 ಓವರ್‌ನಲ್ಲಿ 2 ವಿಕೆಟ್ ಕಳೆದುಕೊಂಡು 24 ರನ್ ಗಳಿಸುವುದರ ಮೂಲಕ ವಿಜಯ ಸಾಧಿಸಿತು. ಪ್ರಥಮ ಬಹುಮಾನವಾಗಿ ಹನೂರು ಎಚ್‌ಸಿಸಿ ತಂಡಕ್ಕೆ 25 ಸಾವಿರ ರೂ., ಟ್ರೋಫಿ ಹಾಗೂ ದ್ವಿತೀಯ ಬಹುಮಾನವಾಗಿ ಮಣಗಳ್ಳಿ ಕ್ರಿಕೆಟರ್ಸ್‌ ತಂಡಕ್ಕೆ 15 ಸಾವಿರ ರೂ., ಟ್ರೋಫಿ ವಿತರಿಸಲಾಯಿತು. ಪಂದ್ಯ ಶ್ರೇಷ್ಠ ಆಟಗಾರನಾಗಿ ಅಪ್ಪು ಆಯ್ಕೆಯಾದರು. ತಾಪಂ ಮಾಜಿ ಸದಸ್ಯ ಜವಾದ್ ಆಹಮದ್ ಬಹುಮಾನ ವಿತರಿಸಿದರು. ಮಂಗಲ ಉಲ್ಲಾಸ್, ನೂತನ್, ಸಂಜಯ್, ಫಾಜೀಲ್, ಜಾನ್, ರವಿ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net