ಆಲೋಚನೆ, ಏಕಾಗ್ರತೆ ವೃದ್ಧಿ

21 HANUR 3
Published on

ಹನೂರು: ವಿಶ್ವ ಯೋಗ ದಿನ ಅಂಗವಾಗಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಆವರಣದಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ ನಡೆಯಿತು.

ಸೂರ್ಯ ನಮಸ್ಕಾರ, ಶಿಲಭಾಸನ, ವೃಕ್ಷಾಸನ, ಪಾದಾಸನ ಸೇರಿದಂತೆ ಇತರ ಆಸನಗಳನ್ನು ವಿದ್ಯಾರ್ಥಿಗಳು ಅಭ್ಯಸಿಸಿದರು. ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೈಹಿಕ ನಿಯಂತ್ರಣದಲ್ಲಿ ಹಿಡಿತ ಇಲ್ಲದಿರುವುದರಿಂದ ವ್ಯಕ್ತಿ ಒತ್ತಡಗಳಿಗೆ ಸಿಲುಕುತ್ತಿದ್ದಾನೆ. ಹಾಗಾಗಿ ಉತ್ತಮ ಆರೋಗ್ಯ ಹೊಂದಲು ಯೋಗ ಬಹಳ ಸಹಕಾರಿ ಎಂದರು.

ಯೋಗ ಪ್ರಾಚೀನ, ಪಾರಂಪರಿಕ ಇತಿಹಾಸ ಹೊಂದಿದ್ದು, ವ್ಯಕ್ತಿಯ ಮನಸ್ಸು, ಶರೀರ ಹಾಗೂ ಆಲೋಚನೆಗಳನ್ನು ವೃದ್ಧಿಸುವುದರ ಮೂಲಕ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಜತೆಗೆ ದೈಹಿಕವಾಗಿಯೂ ಸದೃಢಗೊಳಿಸುತ್ತದೆ. ಈ ಕಾರಣಕ್ಕಾಗಿಯೇ ಇಂದು ಎಲ್ಲ ದೇಶಗಳು ಯೋಗವನ್ನು ಅಳವಡಿಸಿಕೊಂಡಿದ್ದು, ಜಾಗತಿಕ ಆಂದೋಲನವಾಗಿದೆ ಎಂದರು. ಪ್ರಾಂಶುಪಾಲ ಪ್ರಭುಸ್ವಾಮಿ, ಮುಖ್ಯಶಿಕ್ಷಕ ಶಿವಕುಮಾರ್, ವೈದ್ಯೆ ಡಾ.ಜಾಹ್ನವಿ, ಮಠದ ಭಕ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net