

ಹನೂರು: ತಾಲೂಕಿನ ಲೊಕ್ಕನಹಳ್ಳಿ ಸಮೀಪದ ಆಂಡಿಪಾಳ್ಯ ಗ್ರಾಮದ ಬಳಿ ಮಂಗಳವಾರ ಬೀದಿ ನಾಯಿಗಳ ದಾಳಿಗೆ ಜಿಂಕೆಯೊಂದು ಮೃತಪಟ್ಟಿದೆ.
ಬೆಳಗ್ಗೆ 8ರ ಸುಮಾರು ಸಮೀಪದ ಅರಣ್ಯ ಪ್ರದೇಶದಿಂದ ಜಿಂಕೆಯೊಂದು ಗ್ರಾಮದತ್ತ ಆಗಮಿಸಿದ್ದು, ಜಮೀನೊಂದರಲ್ಲಿ ನಿಂತಿತ್ತು. ಈ ವೇಳೆ ಬೀದಿ ನಾಯಿಗಳು ಸುತ್ತುವರಿದು ದಾಳಿ ನಡೆಸುತ್ತಿದ್ದವು. ಇದನ್ನು ಗಮನಿಸಿದ ಸ್ಥಳೀಯರು ನಾಯಿಗಳನ್ನು ಓಡಿಸಲು ಮುಂದಾಗುವುದರೊಳಗೆ ಜಿಂಕೆ ಗಾಯಗೊಂಡಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಲಾಗಿ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಅಗತ್ಯ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಜಿಂಕೆ ಮೃತಪಟ್ಟಿದೆ.