ಭರವಸೆ ನೀಡಿದ್ದ ಸರ್ಕಾರಿ ಸವಲತ್ತನ್ನು ಕೊಡಿಸಿ

01 HANUR 4
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು : ಸರ್ಕಾರವೇ ಭರವಸೆ ನೀಡಿದ್ದ ಸವಲತ್ತುಗಳನ್ನು ಕೊಡಿಸಿ, ಅಗತ್ಯ ಚಿಕಿತ್ಸೆ ದೊರಕಲು ನೆರವಾಗಿ ಎಂದು ಸುಳವಾಡಿ ವಿಷ ಪ್ರಸಾದ ಸೇವನೆಯ ಸಂತ್ರಸ್ತರು ಶಾಸಕ ಎಂ.ಆರ್ ಮಂಜುನಾಥ್‌ಗೆ ಮನವಿ ಮಾಡಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಶುಕ್ರವಾರ ಸಂತ್ರಸ್ಥರು ಭೇಟೆಯಾದ ವೇಳೆ ಎಂ.ಟಿ ದೊಡ್ಡಿ ಗ್ರಾಮದ ಶೋಭಾ ಮಾತನಾಡಿ, ವಿಷ ಪ್ರಸಾದ ಸೇವನೆಯಿಂದ 125ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಇದರಲ್ಲಿ ಬಹುತೇಕ ಜನರು ಇನ್ನು ಚೇತರಿಸಿಕೊಂಡಿಲ್ಲ.

ಅಶಕ್ತತೆ ಕಾರಣ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಲು ಸಾಧ್ಯವಾಗುತ್ತಿಲ್ಲ. ಶಾಲೆಗೆ ತೆರಳುವ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇದರಿಂದ ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ಘಟನೆಯಿಂದ ನೊಂದವರಿಗೆ ಸರ್ಕಾರ ಜಮೀನು, ನಿವೇಶನವನ್ನು ನೀಡುವುದಾಗಿ ಭರವಸೆ ನೀಡಿತ್ತು. ಆದರೆ 7 ವರ್ಷ ಕಳೆದರೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಹಾಗೂ ನೊಂದವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡುವಂತೆ ಮನವಿ ಮಾಡಿದರು.

ಸೂಚನೆ: ಸಮಸ್ಯೆಗಳನ್ನು ಆಲಿಸಿದ ಶಾಸಕರು, ಸುಳವಾಡಿ ಸಂತ್ರಸ್ತರಿಗೆ ದಿನಾಂಕವನ್ನು ನಿಗದಿಪಡಿಸಿ ಅಗತ್ಯ ಚಿಕಿತ್ಸೆ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಕಾಶ್ ಅವರಿಗೆ ಸೂಚಿಸಿದರು. ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳ ಸಂಬಂಧ ಅಗತ್ಯ ಕ್ರಮವಹಿಸಲಾಗುವುದು. ಆಹಾರ ಕಿಟ್ ಕೊಡಿಸಲು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ನೀರಿನ ಸಮಸ್ಯೆ ನೀಗಿಸಿ:

ಇದೇ ವೇಳೆ ತಾಲೂಕಿನ ಮರಿಯಮಂಗಲ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮಹಿಳೆಯರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಬಿಂದಿಗೆ ನೀರಿಗೂ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ನೀರಿನ ಸಮಸ್ಯೆಯನ್ನು ನೀಗಿಸುವಂತೆ ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಗ್ರಾಮಕ್ಕೆ ಶೀಘ್ರವೇ ತೆರಳಿ ಪರಿಶೀಲಿಸಿ, ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಕೆ ಚೈತ್ರಾ, ತಾಪಂ ಇಒ ಉಮೇಶ್, ಶಿರಸ್ತೆದಾರ್ ನಾಗೇಂದ್ರ, ಆರ್‌ಐ ಶೇಷಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net