ಬಸಪ್ಪನದೊಡ್ಡಿ ಸರ್ಕಾರಿ ಶಾಲೆಗೆ ಡಿಡಿಪಿಐ ಭೇಟಿ

06 HANUR 3
Published on

ಹನೂರು : ಬಸಪ್ಪನದೊಡ್ಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಭೇಟಿ ನೀಡಿ ಮಕ್ಕಳ ಕಲಿಕಾ ಪ್ರಗತಿ ಮಾಹಿತಿ ಪಡೆದರು.

ಮಕ್ಕಳ ದಾಖಲಾತಿ, ಶೈಕ್ಷಣಿಕ ಪ್ರಗತಿ ಹಾಗೂ ಶಾಲೆಗೆ ಸಂಬಂಧಿಸಿದಂತೆ ವಿವಿಧ ಚಟುವಟಿಕೆಗಳ ಮಾಹಿತಿಯನ್ನು ಮುಖ್ಯ ಶಿಕ್ಷಕ ವೀರಪ್ಪ ಅವರಿಂದ ಪಡೆದರು.

ನಲಿಕಲಿ ಹಾಗೂ ಸ್ಮಾರ್ಟ್ ಕ್ಲಾಸ್ ಕೊಠಡಿಗೆ ತೆರಳಿ ಮಕ್ಕಳ ಪ್ರಗತಿ ವೀಕ್ಷಿಸಿದರು. ಶಿಕ್ಷಕರಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು. ಎನ್‌ಎಂಎಂಸ್ ಪರೀಕ್ಷೆಗೆ ಬಗ್ಗೆ ಚರ್ಚಿಸಿದ ಅವರು, ಶಾಲಾವರಣ ವೀಕ್ಷಿಸಿದರು. ಬಳಿಕ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸಮಿತಿಯೊಂದಿಗೆ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶ್ ಈ ಸಂದರ್ಭ ಮಾತನಾಡಿ, ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಇಲ್ಲದ ಪರಿಣಾಮ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿದೆ. ಬಿಸಿಯೂಟ ಯೋಜನೆಯ ಊಟದ ಕೊಠಡಿ ಇಲ್ಲ. ಈ ಬಗ್ಗೆ ಕ್ರಮವಹಿಸಿ ಎಂದು ಮನವಿ ಮಾಡಿದರು.

ಡಿಡಿಪಿಐ ಅರಸ್ ಪ್ರತಿಕ್ರಿಯಿಸಿ, ಎಸ್‌ಡಿಎಂಸಿ ಹಾಗೂ ಪಿಡಿಒ ನೇತೃತ್ವದಲ್ಲಿ ಊಟದ ಕೊಠಡಿ ನಿರ್ಮಾಣ ಸಂಬಂಧ ಕ್ರಿಯಾಯೋಜನೆ ತಯಾರಿಸಿ ತಾಲೂಕು ಪಂಚಾಯಿತಿಗೆ ಅವರಿಗೆ ಸಲ್ಲಿಸಿ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತಂದು ಊಟದ ಸಭಾಂಗಣವನ್ನು ನಿರ್ಮಿಸಿ ಕೊಡಲಾಗುವುದು. ಜತೆಗೆ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ಸಂಬಂಧ ಪರಿಶೀಲಿಸಿ ಅಗತ್ಯ ಕ್ರಮವಹಿಸಲಾಗುವುದು ಎಂದರು.

ಶಿಕ್ಷಕರಾದ ದೊರೆಸ್ವಾಮಿ, ಆನಂದ್, ಪುಟ್ಟರಾಮು, ಸೋಮಣ್ಣ, ಮಾಲಾ ಹಾಗೂ ಸುಧಾಮಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net