ವಿದ್ಯುತ್ ತಗುಲಿ 2 ಹಸು ಸಾವು

Published on

ಹನೂರು: ತಾಲೂಕಿನ ರಾಮಾಪುರ ಗ್ರಾಮದಲ್ಲಿ ಗುರುವಾರ ಸಂಜೆ ವಿದ್ಯುತ್ ತಗುಲಿ 2 ಹಸುಗಳು ಮೃತಪಟ್ಟಿವೆ.
ಗ್ರಾಮದ ಶಿವನಮಣಿ ಎಂಬುವರು ತಮ್ಮ ತೋಟದ ಜಮೀನಿನ ಸಮೀಪದಲ್ಲಿ ಗುರುವಾರ ಇಲಾತಿ ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದರು. ಆ ಹಸುಗಳು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಿರುವ ಕಂಬದ ಸಮೀಪದಲ್ಲಿ ವಿದ್ಯುತ್ ತಗುಲಿ ಮೃತಪಟ್ಟಿದ್ದವು. ಸುದ್ದಿ ತಿಳಿದು ಸ್ಥಳಕ್ಕೆ ಸೆಸ್ಕ್ ನೌಕರರು ಆಗಮಿಸಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ವರದಿ ನೀಡುವಂತೆ ಎಇಇ ಶಂಕರ್ ಸೂಚಿಸಿದರು.
80 ಸಾವಿರ ರೂ. ಬೆಲೆಬಾಳುತ್ತಿದ್ದ ಇಲಾತಿ ಹಸುಗಳಿಂದ ಜೀವನ ನಿರ್ವಹಣೆ ಸಾಗುತ್ತಿತ್ತು. ಇದೀಗ ಅವು ಮೃತಪಟ್ಟಿದ್ದು, ತುಂಬ ನಷ್ಟವಾಗಿದೆ. ಆದ್ದರಿಂದ ಸರ್ಕಾರದಿಂದ ಪರಿಹಾರ ನೀಡುವಂತೆ ಶಿವನಮಣಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net