ಮ. ಬೆಟ್ಟದಲ್ಲಿ ಫೆ.13 ರಂದುಸಚಿವ ಸಂಪುಟ ಸಭೆಗೆ ಪೂರ್ವ ಸಿದ್ಧತೆ  - 19 ಸಮಿತಿ ರಚನೆ

04bgnag
Published on

 ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಮಾಹಿತಿ

ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಫೆ.13 ರಂದು ನಡೆಯುವ ಸಚಿವ ಸಂಪುಟ ಸಭೆಗೆ ಅಗತ್ಯ ಪೂರ್ವ ಸಿದ್ಧತೆ ಕೈಗೊಳ್ಳಲು ಸೋಮವಾರ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ 19 ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ. ಮ.ಬೆಟ್ಟದ ದೀಪದಗಿರಿ ಒಡ್ಡುವಿನ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿಯ ಬೃಹತ್ ಪ್ರತಿಮೆ ಆವರಣದಲ್ಲಿ ಸಭೆ ನಡೆಯಲಿದೆ. ಈ ಸಂಬಂಧ ಕೆಲಸ ಕಾರ್ಯ ನಿರ್ವಹಿಸಲು ಹಾಗೂ ಸೂಕ್ತ ಶಿಷ್ಟಾಚಾರ ನಿರ್ವಹಿಸಲು ಸಮಿತಿಗಳನ್ನು ರಚಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಸ್ವಾಗತ ಸಮಿತಿಗೆ ಮೈಸೂರು ಪ್ರಾದೇಶಿಕ ಆಯಕ್ತ ಅಧ್ಯಕ್ಷರಾಗಿದ್ದು, ಸದಸ್ಯ ಕಾರ್ಯದರ್ಶಿಯಾಗಿ ಚಾ.ನಗರ ಜಿಲ್ಲಾಧಿಕಾರಿ, ಸದಸ್ಯರಾಗಿ ಮೈಸೂರು ವಿಭಾಗದ ಪೊಲೀಸ್ ಮಹಾನಿರ್ದೇಶಕ, ಚಾ.ನಗರ ಜಿಪಂ ಸಿಇಒ, ಎಸ್ಪಿ ಹಾಗೂ ಸೆಸ್ಕ್ ಎಂಡಿ ಅವರನ್ನು ನೇಮಕ ಮಾಡಲಾಗಿದೆ. ಹಣಕಾಸು ಸಮಿತಿಗೆ ಡಿಸಿ ಶಿಲ್ಪಾನಾಗ್ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಜಿಪಂ ಸಿಇಒ ಮೋನಾರೋತ್, ಸದಸ್ಯ ಕಾರ್ಯದರ್ಶಿಯಾಗಿ ಎಡಿಸಿ ಗೀತಾ ಹುಡೇದ, ಸದಸ್ಯರಾಗಿ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಹಾಗೂ ಜಿಪಂ ಮುಖ್ಯ ಲೆಕ್ಕಾಧಿಕಾರಿ ಬಸವರಾಜು ಅವರನ್ನು ನೇಮಕ ಮಾಡಲಾಗಿದೆ.

ಆಹಾರ ಮತ್ತು ಕುಡಿಯುವ ನೀರಿನ ಸಮಿತಿಗೆ ಜಿಪಂ ಸಿಇಒ ಮೋನಾರೋತ್ ಅಧ್ಯಕ್ಷ, ಸದಸ್ಯ ಕಾರ್ಯದರ್ಶಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಯೋಗಾನಂದ, ಸದಸ್ಯರಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬಿದ್, ಪಿಡಬ್ಲ್ಯುಡಿ ಇಇ ಮಹೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಆನಂದಮೂರ್ತಿ ಹಾಗೂ ಕೊಳ್ಳೇಗಾಲದ ತಹಸೀಲ್ದಾರ್ ಐ.ಈ ಬಸವರಾಜು, ಸಮನ್ವಯ ಹಾಗೂ ಸಹಾಯವಾಣಿ ಸಮಿತಿಗೆ ಭೂ ದಾಖಲೆಗಳ ಉಪ ನಿರ್ದೇಶಕಿ ವಿದ್ಯಾಯಿನಿ ನೇಮಕ ಗೊಂಡಿದ್ದಾರೆ.

ವಸತಿ ಸಮಿತಿ ಅಧ್ಯಕ್ಷರಾಗಿ ಕೊಳ್ಳೇಗಾಲ ಎಸಿ ಬಿ.ಆರ್ ಮಹೇಶ್, ಸಾರಿಗೆ ಮತ್ತು ಸಂಪರ್ಕ ಸಮಿತಿ ಅಧ್ಯಕ್ಷರಾಗಿ ಚಾ.ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಅಶೋಕ್, ಭದ್ರತಾ ಮತ್ತು ಪ್ರವೇಶ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಎಸ್ಪಿ ಡಾ. ಬಿ.ಟಿ ಕವಿತಾ, ಆರೋಗ್ಯ ಸಮಿತಿಗೆ ಅಧ್ಯಕ್ಷರಾಗಿ ಡಿಎಚ್‌ಒ ಚಿದಂಬರಂ, ಶಿಷ್ಟಾಚಾರ ಸಮಿತಿಗೆ ಅಪರ ಜಿಲ್ಲಾಧಿಕಾರಿ ಗೀತಾ ಹುದೇಡಾ, ಅಲಂಕಾರ ಸಮಿತಿಗೆ ಕೃಷಿ ಇಲಾಖೆಯ ಉಪ ನಿರ್ದೇಶಕಿ ಸುಷ್ಮಾ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಜ್ಯೋತಿ ಅರಸ್, ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿಗೆ ಸೆಸ್ಕ್ ಇಇ ಪ್ರದೀಪ್, ಕಲಾ ತಂಡಗಳ ಸಮಿತಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಉದಯ ಕುಮಾರ್, ಉದ್ಘಾಟನಾ ಸ್ಥಳಗಳ ನಿರ್ವಹಣೆ ಸಮಿತಿಗೆ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಪ್ರಚಾರ ಸಮಿತಿಗೆ ಕೆಆರ್‌ಐಡಿಎಲ್ ಇಇ ಚಿಕ್ಕಲಿಂಗಯ್ಯ, ಹೆಲಿಪ್ಯಾಡ್ ನಿರ್ಮಾಣ ಸಮಿತಿಗೆ ಎಇಇ ಮಹೇಶ್, ಗಣ್ಯರಿಗೆ ದರ್ಶನ ವ್ಯವಸ್ಥೆ ಸಮಿತಿಗೆ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್‌ಬಾಬು, ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net