

ಹನೂರು: ಪಟ್ಟಣದ ಲೋಕೋಪಯೋಗಿ ಅತಿಥಿ ಗೃಹದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ತಾಲೂಕು ನಾಯಕರ ಸಂಘವನ್ನು ಸ್ಥಾಪಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷರಾಗಿ ಉದ್ದನೂರು ಎಚ್.ಕೆ.ಶಿವಣ್ಣ, ಅಧ್ಯಕ್ಷರಾಗಿ ಹುತ್ತೂರಿನ ಪುಟ್ಟವೀರನಾಯಕ, ಉಪಾಧ್ಯಕ್ಷರಾಗಿ ನಂಜನಾಯಕ, ವೆಂಕಟಾಚಲ, ಎಸ್.ಕೆಂಚಪ್ಪ, ನಂಜಪ್ಪ, ಕಾರ್ಯದರ್ಶಿ ಚಂಗವಾಡಿ ರಾಚಪ್ಪನಾಯಕ, ಸಹ ಕಾರ್ಯದರ್ಶಿಯಾಗಿ ವೆಂಕಟಮಾಧು, ಚಿಕ್ಕ ಬಿಸಿಲಯ್ಯ, ಮುನಿಯಪ್ಪ, ಬಾಲಕೃಷ್ಣ, ಖಜಾಂಚಿಯಾಗಿ ಉದ್ದನೂರು ಮಲ್ಲೇಶ್, ನಿರ್ದೇಶಕರಾಗಿ ಕಣ್ಣೂರು ವೆಂಕಟಮಾಧು, ಬಂಡಳ್ಳಿಯ ರಾಚಪ್ಪ, ಜಗದೀಶ್, ಹನೂರಿನ ಶಿವಪ್ಪನಾಯಕ, ಮಹೇಶ್, ವಿ.ಎಸ್.ದೊಡ್ಡಿಯ ಕೆ.ಮಹದೇವ, ಕೂಡ್ಲೂರಿನ ಮಹೇಶ್ ಹಾಗೂ ಲೊಕ್ಕನಹಳ್ಳಿಯ ದೊಡ್ಡ ಮಾದನಾಯ್ಕ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷ ಪುಟ್ಟವೀರನಾಯ್ಕ ಮಾತನಾಡಿ, ಹನೂರು ತಾಲೂಕಿನಲ್ಲಿ ನಾಯಕರ ಸಂಘ ಇರಲಿಲ್ಲ. ಹಾಗಾಗಿ ಈವರೆಗೂ ಕೊಳ್ಳೇಗಾಲ ತಾಲೂಕಿನ ಸಂಘವೇ ಹನೂರು ಭಾಗದ ಆಗುಹೋಗುಗಳನ್ನು ನೋಡಿಕೊಳ್ಳುತ್ತಿತ್ತು. ಆದರೆ ಹನೂರು ತಾಲೂಕು ಪ್ರತ್ಯೇಕವಾಗಿ ರಚನೆಯಾದ ಹಿನ್ನೆಲೆಯಲ್ಲಿ ಇದೀಗ ನೂತನ ಸಂಘವನ್ನು ಸ್ಥಾಪಿಸಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಸ್ಪರ ಸಹಕಾರ ನೀಡುವುದರ ಮೂಲಕ ಸಂಘದ ಅಭಿವೃದ್ಧಿ ಹಾಗೂ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಇನ್ನು ತಾಲೂಕಿನಲ್ಲಿ ಸಮುದಾಯವು ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಇದಕ್ಕೆ ವಿದ್ಯಾವಂತರ ಸಂಖ್ಯೆ ಕಡಿಮೆ ಇರುವುದೇ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣದ ಕಡೆ ಹೆಚ್ಚು ಗಮನಹರಿಸಬೇಕು. ಶೈಕ್ಷಣಿಕವಾಗಿ ಸಾಧನೆಗೈಯ್ಯಲು ಪ್ರೇರೇಪಿಸಬೇಕು. ಅಗತ್ಯ ಮಾರ್ಗದರ್ಶನ ನೀಡಬೇಕು. ಇದರಿಂದ ಸಮುದಾಯವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.