ಮಟ್ಕಾ ಬರೆಯುವ ವ್ಯಕ್ತಿ ಬಂಧನ

Arrest Kaidhi
Published on

ಹನುಮಸಾಗರ: ಸಮೀಪದ ವೆಂಕಟಾಪುರ ಗ್ರಾಮದಲ್ಲಿ ಮಟ್ಕಾ ಬರೆಯುತ್ತಿದ್ದವನನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ. ಶರಣಪ್ಪ ಕೃಷ್ಣಪ್ಪ ಲಕ್ಕಲಕಟ್ಟಿ ಬಂಧಿತ. ಗ್ರಾಮದ ದುರ್ಗಮ್ಮನ ಕಟ್ಟೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಚೀಟಿ ಬರೆಯುತ್ತಿರುವಾಗ ಪಿಎಸ್‌ಐ ಅಶೋಕ ಬೇವೂರು ಮತ್ತು ಸಿಬ್ಬಂದಿ ದಾಳಿ ಮಾಡಿ ಬಂಧಿಸಿದ್ದಾರೆ. ಬಂಧಿತನಿಂದ 2150 ರೂ ನಗದು, ಮಟ್ಕಾ ಚೀಟಿ ವಶಕ್ಕೆ ಪಡೆದು, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net