ಹನುಮಸಾಗರದ ವಿವಿಧೆಡೆ ಮಳೆಗಾಳಿಗೆ ವಿದ್ಯುತ್ ತಂತಿ ಮೇಲೆ ಬಿದ್ದ ಬೇವಿನ ಮರ

090520 Hanumasagara Rainstorm
Published on

ಹನುಮಸಾಗರ: ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಮಳೆ ಪ್ರಾರಂಭವಾಗುತ್ತಿದಂತೆ ಗಾಳಿ ಜೋರಾಗಿ ಬಿಸಿದ್ದರಿಂದ ಪಟ್ಟಣದ 7ನೇ ವಾರ್ಡ್‌ನ ಪಾಟೀಲರ ಓಣಿಯಲ್ಲಿ ಬೇವಿನ ಮರವೊಂದು ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದಿದ್ದರಿಂದ ಪಟ್ಟಣದಲ್ಲಿ ಕೆಲಕಾಲ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಯಿತು. ಸ್ಥಳಕ್ಕೆ ಜೆಸ್ಕಾಂ ಶಾಖಾಧಿಕಾರಿ ಬಸವರಾಜ ಮುದಗಲ್ ಅವರು ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಮರದ ಕೊಂಬೆ ತೆರವುಗೊಳಿಸಿದರು. ಪಟ್ಟಣದ ಕೆಲ ಓಣಿಗಳ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದುಹೋಗಲು ದಾರಿ ಇಲ್ಲದೆ, ಬೀದಿಯಲ್ಲಿ ಮಳೆ ನೀರು ಮತ್ತು ಚರಂಡಿ ನೀರು ಹರಿದಿದ್ದರಿಂದ ಮನೆಯೊಳಗೆ ನೀರು ನುಗ್ಗುವ ಆತಂಕದಲ್ಲಿದ್ದ ಕೆಲ ನಿವಾಸಿಗಳು ಚರಂಡಿ ಸ್ವಚ್ಛಗೊಳಿಸದ ಗ್ರಾಪಂ ಅಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಹಿಡಿಶಾಪ ಹಾಕುತ್ತಾ ನೀರು ಮನೆಯ ಮುಂದೆ ನಿಲ್ಲದೆ ಹರಿದು ಹೋಗಲು ದಾರಿ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net