ಹನುಮಸಾಗರದಲ್ಲಿ ಯೂರಿಯಾಕ್ಕಾಗಿ ಅಲೆದಾಡುತ್ತಿರುವ ಅನ್ನದಾತರು

24082020 Hanumasagar Trouble for farmers
Published on

ಚೀಲಕ್ಕೆ 550 ರೂ.ವರೆಗೆ ಮಾರಾಟ | ಗೊಬ್ಬರಕ್ಕಾಗಿ ಕೃಷಿಕರ ಪರದಾಟ

ಹನುಮಸಾಗರ: ಸ್ಥಳೀಯ ಹಾಗೂ ಹನುಮನಾಳ ಹೋಬಳಿ ವ್ಯಾಪ್ತಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದೆ. ರೈತರು ಯೂರಿಯಾ ತರಲು ಪಟ್ಟಣದಿಂದ ಪಟ್ಟಣಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ 20 ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ರೈತರು ಬಿತ್ತಿದ ಸಜ್ಜೆ, ಮೇಕ್ಕೆಜೋಳ ಸೇರಿ ವಿವಿಧ ಬೆಳೆಗಳು ಬಿಳಿ ಬಣ್ಣಕ್ಕೆ ತಿರುಗಿದೆ. ಉತ್ತಮ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಆತಂಕ ಶುರುವಾಗಿದೆ. ಏನಾದರೂ ಮಾಡಿ ಬೆಳೆಗಳನ್ನು ಕಾಪಾಡಬೇಕೆಂದು ಕೈಯಲ್ಲಿ ಹಣ ಹಿಡಿದು ಗೊಬ್ಬರಕ್ಕಾಗಿ ಸುತ್ತುತ್ತಿದ್ದಾರೆ. ಆದರೆ, ಯೂರಿಯಾ ಮಾತ್ರ ದೊರೆಯುತ್ತಿಲ್ಲ.

ಆದರೆ, ಕಾಳಸಂತೆಯಲ್ಲಿ ಯೂರಿಯಾ ಮಾರಾಟವಾಗುತ್ತಿದೆ. ಖಾಸಗಿ ವಾಹನಗಳ ಮೂಲಕ ವಿವಿಧ ಗ್ರಾಮಗಳಲ್ಲಿ ಯೂರಿಯಾ ಗೊಬ್ಬರ ತಂದು ಚೀಲಕ್ಕೆ 550 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಬೇರೆ ದಾರಿ ಇಲ್ಲದೆ ಅನ್ನದಾತರು 300 ರೂ. ಇರುವ ಚೀಲ ಯೂರಿಯಾಗೆ 550ಕ್ಕೂ ಹೆಚ್ಚು ಹಣ ನೀಡಿ ಖರೀದಿಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ.

ರೈತರ ಬೇಡಿಕೆಗೆ ತಕ್ಕಷ್ಟು ಯೂರಿಯಾ ಗೊಬ್ಬರ ಸ್ಟಾಕ್ ಇಲ್ಲ. ಈವರೆಗೆ ಬಂದ ಗೊಬ್ಬರವನ್ನು ವಿತರಿಸಲಾಗಿದೆ. ಸದ್ಯ ಮಂಗಳೂರಿಗೆ ಯೂರಿಯಾ ಬಂದಿದೆ ಎಂದು ಸುದ್ದಿ ಇದ್ದು, ಅಲ್ಲಿಂದ ರೈಲಿನಲ್ಲಿ ಕೊಪ್ಪಳಕ್ಕೆ ಬಂದ ತಕ್ಷಣ ವಿತರಿಸಲಾಗುವುದು. ವಿಶಾಲ್, ಮ್ಯಾನೇಜರ್ ಕರ್ನಾಟಕ ಮಾರಾಟ ಮಹಾಮಂಡಳಿ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net