ವಿದ್ಯಾರ್ಥಿಗಳಿಗೆ ಕಾನೂನು ಅರಿವು ಅಗತ್ಯ: ವಕೀಲ ಸುರೇಶಬಾಬು ಜಮಖಂಡಿಕರ ಅಭಿಮತ

220922 Manvina Itagi Legal Awareness Programme
ಹನುಮಸಾಗರ ಸಮೀಪದ ಮಾವಿನ ಇಟಗಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ.
Published on

ಹನುಮಸಾಗರ: ಪ್ರತಿಯೊಬ್ಬ ವಿದ್ಯಾರ್ಥಿ ಕಾನೂನು ಅರಿವು ಪಡೆದುಕೊಳ್ಳಬೇಕು ಎಂದು ವಕೀಲ ಸುರೇಶಬಾಬು ಜಮಖಂಡಿಕರ ಹೇಳಿದರು. ಮಾವಿನ ಇಟಗಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಬುಧವಾರ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳ್ಳತನ, ಮೋಸ ಮಾಡುವುದು ಕಂಡುಬಂದರೆ ಪೊಲೀಸರಿಗೆ ತಿಳಿಸಬೇಕು. ಸುರಕ್ಷತೆಯ ಜತೆಗೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪ್ರತಿ ವ್ಯಕ್ತಿಯೂ ಕಾನೂನು ಪಾಲನೆ ಮಾಡಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾದ ವಾಸುದೇವ ನಾಗೂರು, ಮುತ್ತು ವಡ್ಡರ, ಮುಖ್ಯಶಿಕ್ಷಕ ಖಾಜಾ ಹುಸೇನ್ ಒಂಟೇಳಿ, ಶಿಕ್ಷಕರಾದ ಸುಶೀಲೇಂದ್ರ ಕುಲಕರ್ಣಿ, ಗುರುಪಾದಪ್ಪ ಮಚಗಾರ, ನಾರಾಯಣ ಪಂಚಾಳ, ಅಮರೇಶ ಹಿರೇಮಠ, ವೆಂಕಟೇಶ ಕರೇಕಲ್ಲ, ದುರಗೇಶ ಗೊಲ್ಲರ, ಮುಸ್ತಫಾ ನಾಲಬಂದ, ಹುಸೇನಸಾಬ್ ಕಟಗಿ, ಅಮರೇಶ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net