ಶಾಲಾ ಸಮಯಕ್ಕೆ ಬಸ್ ಬಿಡಿ: ಪರಮನಹಟ್ಟಿ, ಕೋನಾಪುರ ಗ್ರಾಮದ ವಿದಾರ್ಥಿಗಳ ಪ್ರತಿಭಟನೆ

24062022 Hanumasagar Students protest
Published on

ಹನುಮಸಾಗರ: ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ಒತ್ತಾಯಿಸಿ ಸಮೀಪದ ಪರಮನಹಟ್ಟಿ ಹಾಗೂ ಕೋನಾಪುರ ಗ್ರಾಮದ ಬಾದಿಮನಾಳ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳು ಬಸ್ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪರಮನಹಟ್ಟಿ ಹಾಗೂ ಕೋನಾಪುರದಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಹಗೀರಗುಡದೂರು ಪ್ರೌಢಶಾಲೆಗೆ ಹೋಗಿ ಬರುತ್ತೇವೆ. ನಿತ್ಯ 5 ಕಿಮೀಗೂ ಹೆಚ್ಚು ನಡೆದುಕೊಂಡು ಹೋಗಿ ಬರಬೇಕಿದೆ. ಆದ್ದರಿಂದ ಬೆಳಗ್ಗೆ ಮತ್ತು ಸಂಜೆ ಕುಷ್ಟಗಿ-ರಾಂಪುರ ಬಸ್ ಅನ್ನು ಎರಡು ಗ್ರಾಮದ ಮೂಲಕ ಸಂಚರಿಸುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net