ಸಮುದಾಯ ಭವನ ಒಳ್ಳೆಯ ಕಾರ್ಯಗಳಿಗೆ ಬಳಸಲು ಶಾಸಕ ಅಮರೇಗೌಡ ಬಯ್ಯಪುರ ಸಲಹೆ

Hanumasagara Development Work Bhoomi Pooja
ಹನುಮಸಾಗರದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಿಸಲಾಗುತ್ತಿರುವ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಾಜಿ ಶಾಸಕ ಹಸನ್‌ಸಾಬ್ ದೋಟಿಹಾಳ ಶನಿವಾರ ಭೂಮಿ ಪೂಜೆ ನೆರೆವೇರಿಸಿದರು.
Published on

ಹನುಮಸಾಗರ: ಸಮುದಾಯ ಭವನಗಳನ್ನು ಸಮಾಜದ ಅಭಿವೃದ್ಧಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದ ಎರಡನೇ ವಾರ್ಡ್‌ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮುದಾಯ ಭವನ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಮೌಲಾನ್ ಅಬುಲ್ ಕಲಾಂ ಆಜಾದ್ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಸಮುದಾಯ ಭವನ ಅನಗತ್ಯ ಚಟುವಟಿಕೆಗಳಿಗೆ ಬಳಕೆಯಾಗದೆ ಒಳ್ಳೆಯ ಕಾರ್ಯಗಳಿಗೆ ಬಳಕೆಯಾಗಬೇಕು. ಆಗ ಸಮುದಾಯ ಭವನ ನಿರ್ಮಿಸಿದ್ದು ಸಾರ್ಥಕವಾಗಲಿದೆ. ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಕಟ್ಟಡ ನಿರ್ಮಾಣಕ್ಕೆ ಬಳಸುವ ವಸ್ತುಗಳ ಗುಣಮಟ್ಟದ ಬಗ್ಗೆ ಜನರು ಗಮನ ಹರಿಸಬೇಕು ಎಂದರು.

ಮಾಜಿ ಶಾಸಕ ಹಸನ್ ಸಾಬ್ ದೋಟಿಹಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದಪ್ಪ ತಳವಾರ, ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಶ್ರೀಶೈಲ ಮೋಟಗಿ, ವೀರಭದ್ರಪ್ಪ ಪತ್ತಾರ, ಚಂದ್ರು ಬೆಳಗಲ್, ರಮೇಶ ಬಡಿಗೇರ, ರುದ್ರಗೌಡ ಗೌಡಪ್ಪನವರ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಸೂಚಪ್ಪ ದೇವರಮನಿ, ತಾಪಂ ಸದಸ್ಯ ಸುರೇಶ ಕುಂಟನಗೌಡ್ರ, ಮುಖಂಡರಾದ ಮಹಾಂತೇಶ ಅಗಸಿಮುಂದಿನ, ಮೈನೂದ್ದೀನ್ ಖಾಜಿ, ಆಸೀಫ್ ಡಾಲಾಯತ್, ದಾವಲಸಾಬ್ ಹೊಸಮನಿ, ಮೌಲಸಾಬ್ ಮೋಟಗಿ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net