ರಸ್ತೆ ಮೇಲೆ ರಾಶಿ, ಸವಾರರಿಗೆ ಕಿರಿಕಿರಿ

Hanumasagara On Road Heap
ಹನುಮಸಾಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ರಾಶಿ ಮಾಡಲು ಸಜ್ಜಿ ತೆನೆಗಳನ್ನು ಹಾಕಿರುವುದು.
Published on

ಹನುಮಸಾಗರ: ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆ ರೈತರು ರಾಶಿ ಮಾಡುತ್ತಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹನುಮನಾಳ, ಗಜೇಂದ್ರಗಡ, ಇಲಕಲ್ಲ, ಗುಡೂರು, ಕುಷ್ಟಗಿಯಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಮತ್ತು ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ವಿವಿಧ ಗ್ರಾಮಗಳ ರಸ್ತೆಗಳ ಮೇಲೆ ರಾಶಿ ಮಾಡುತ್ತಿದ್ದಾರೆ. ವಿಸ್ತರಣೆ ಮಾಡದ ರಸ್ತೆಯಲ್ಲೇ ರೈತರು ರಾಶಿ ಮಾಡುತ್ತಿದ್ದಾರೆ. ಬೈಕ್ ಸವಾರರ ಮೈಮೇಲೆ ಸುಂಕ ಬರುತ್ತಿದೆ, ಗಾಳಿಗೆ ಕಣ್ಣಲ್ಲಿ ಬೀಳುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಸವಾರರು ಒತ್ತಾಯಿಸಿದ್ದಾರೆ.

ರಸ್ತೆ ಮೇಲೆ ರಾಶಿ ಮಾಡುವ ಸ್ಥಳಕ್ಕೆ ಭೇಟಿ ನೀಡಲಾಗುವುದು. ಸವಾರರಿಗೆ ಆಗುವ ತೊಂದರೆಗಳ ಬಗ್ಗೆ ರೈತರಿಗೆ ತಿಳಿಸಿ, ರಸ್ತೆ ಮೇಲೆ ರಾಶಿ ಮಾಡದಂತೆ ನೋಡಿಕೊಳ್ಳಲಾಗುವುದು.| ಅಶೋಕ ಬೇವೂರು, ಪಿಎಸ್‌ಐ, ಹನುಮಸಾಗರ ಪೊಲೀಸ್ ಠಾಣೆ.ಹನುಮಸಾಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮೇಲೆ ರೈತರು ರಾಶಿ ಮಾಡುತ್ತಿರುವುದರಿಂದ ಓಡಾಡಲು ಸಮಸ್ಯೆ ಆಗುತ್ತಿದೆ. ರಾಶಿ ಮಾಡಿದ ನಂತರ ಉಳಿದ ತ್ಯಾಜ್ಯವನ್ನು ರೈತರು ರಸ್ತೆ ಬದಿಯಲ್ಲೇ ಬಿಡುವುದರಿಂದ ಓಡಾಡುವುದು ಕಷ್ಟವಾಗಿದೆ.| ಶರಣಪ್ಪ ಪೂಜಾರ, ವಾಹನ ಸವಾರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net