

ಹನುಮಸಾಗರ: ಸಮೀಪದ ಮನ್ನೇರಾಳ ಮತ್ತು ಹನುಮನಾಳ ಗ್ರಾಮಗಳಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರನ್ನು ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.
ಮನ್ನೇರಾಳ ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದ ಈರನಗೌಡ ಮಾಲಿಪಾಟೀಲ್, ರಮೇಶ ನರಗುಂದ, ಲಿಂಗಪ್ಪ ಸಣ್ಣಗೌಡ್ರ, ಪರಸಪ್ಪ ಲ್ಯಾವಕ್ಕಿ, ಮರಿಯಪ್ಪ ಉಪನಾಳ, ಮಹೇಶ ವಂದಾಲಿ, ಶರಣಪ್ಪ ಗೊಲ್ಲರ, ಪವಾಡೆಪ್ಪ ಲ್ಯಾವಕ್ಕಿ, ರೇವಣಸಿದ್ದಪ್ಪ ಬೆನಕಟ್ಟಿ, ಮಂಜುನಾಥ ಪಾಲಕರ ಎಂಬುವವರನ್ನು ಶನಿವಾರ ರಾತ್ರಿ ಪೊಲೀಸ್‌ರು ಬಂಧಿಸಿದ್ದು, ಬಂಧಿತರಿಂದ 15260 ರೂ. ವಶಪಡಿಸಿಕೊಳ್ಳಲಾಗಿದೆ.
ಹನುಮನಾಳ ಸರ್ಕಾರಿ ಶಾಲೆ ಆವರಣದಲ್ಲಿ ಇಸ್ಪೀಟ್ ಆಡುತ್ತಿದ್ದ ಮಂಜುನಾಥ ಗಜೇಂದ್ರಗಡ, ಹನುಮಪ್ಪ ವಕ್ರದ್, ಬಸನಗೌಡ ಗೌಡ್ರ, ಭೀಮಣ್ಣ ಕುಂಬಾರ, ರವಿ ಭಜಂತ್ರಿ, ಷಣ್ಮುಕಪ್ಪ ಕಮ್ಮಾರ, ಹೊನ್ನಪ್ಪ ಶಾಂತಗೇರಿ ಎಂಬುವವರನ್ನು ಶನಿವಾರ ರಾತ್ರಿ ಪೊಲೀಸ್‌ರು ಬಂಧಿಸಿದ್ದು, ಬಂಧಿತರಿಂದ 11,000 ರೂ. ವಶಪಡಿಸಿಕೊಂಡೊದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.