ಖಾತ್ರಿ ಕೆಲಸ ನೀಡಲು ಮಹಿಳೆಯರ ಒತ್ತಾಯ: ಹನುಮಸಾಗರ ಗ್ರಾಪಂಗೆ ಮುತ್ತಿಗೆ

201222 Hanumasagara GP Siege
??????????
Published on

ಹನುಮಸಾಗರ: ಇಲ್ಲಿನ ವಿವಿಧ ವಾರ್ಡ್ ಮಹಿಳೆಯರು ನರೇಗಾ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ಸೋಮವಾರ ಗ್ರಾಪಂಗೆ ಮುತ್ತಿಗೆ ಹಾಕಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್‌ರನ್ನು ತರಾಟೆಗೆ ತೆಗೆದುಕೊಂಡರು.

ಎಂಟು ದಿನಗಳಿಂದ ಗ್ರಾಮದ ಕೆಲ ಮಹಿಳಾ ಸಂಘದ ಸದಸ್ಯರಿಗೆ ನರೇಗಾ ಕೆಲಸ ನೀಡುತ್ತಿದ್ದೀರಿ, ನಮಗೆ ಯಾಕೆ ಕೊಡುತ್ತಿಲ್ಲ. ನಮಗೂ ಅವರಂತೆ ಕೂಡಲೇ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ವೀರನಗೌಡ ಮಾತನಾಡಿ, ಈ ಹಿಂದೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಮಹಿಳಾ ಸಂಘದ ಕೆಲವರಿಗೆ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದೆ. ನೀವು ಸೂಕ್ತ ದಾಖಲೆ ನೀಡಿದರೆ ಅದಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ತಯಾರಿಸಿ ನಿಮಗೂ ಕೆಲಸ ನೀಡಲಾಗುವುದು ಎಂದು ತಿಳಿಸಿದರು. ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಸದಸ್ಯ ರಿಯಾಜ ಖಾಜಿ, ಮುಖಂಡರಾದ ವೀರೇಶ ಕಟಗಿ, ನಾಗಪ್ಪ ನಿರ್ವಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net