

ಹನುಮಸಾಗರ: ಮಕರ ಸಂಕ್ರಾಂತಿ ನಿಮಿತ್ತ ಸಮೀಪದ ಚಂದಾಲಿಂಗೇಶ್ವರ ದೇವಸ್ಥಾನ ಬಳಿಯ ಹೊಂಡದಲ್ಲಿ ಭಕ್ತರು ಮಡಿಸ್ನಾನ ಮಾಡಿ ದೇವರ ದರ್ಶನ ಪಡೆದರು.
ಬೆಳಗ್ಗೆಯಿಂದ ಹನುಮಸಾಗರ, ಮನ್ನೇರಾಳ, ಬೀಳಗಿ, ಮುದುಟಗಿ, ಚಂದ್ರಗಿರಿ, ಮಾವಿನ ಇಟಗಿ, ಗುಡದೂರಕಲ್, ಕಬ್ಬರಗಿ ಸೇರಿ ವಿವಿಧ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಆಗಮಿಸಿದರು. ವಾಹನ, ಸೈಕಲ್ ಮತ್ತು ನಡಿಗೆಯಲ್ಲಿ ಆಗಮಿಸಿದ್ದರು. ದೇವಸ್ಥಾನದಲ್ಲಿ ಬೆಳಗ್ಗೆಯಿಂದ ಹೋಮ, ಹವನ, ಪಂಚಾಮೃತ, ನೈವೇದ್ಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಂಕ್ರಮಣದಂದು ಈ ಹೊಂಡದಲ್ಲಿ ಸ್ನಾನ ಮಾಡಿದರೆ ಪಾಪಗಳಿಂದ ಮುಕ್ತಿಗೊಳ್ಳುತ್ತಾರೆ ಎಂಬುದು ಈ ಭಾಗದ ಜನರ ನಂಬಿಕೆ.