ಜೆಜೆಎಂ ಕಾಮಗಾರಿ ಬೇಗ ಮುಗಿಸಿ: ಹನುಮಸಾಗರ ಗ್ರಾಪಂ ಕಚೇರಿಗೆ ಸ್ಥಳೀಯರ ಮುತ್ತಿಗೆ

131022 Hanumasagara Gramapanchayat Siege
ಹನುಮಸಾಗರದ ಗ್ರಾಪಂ ಕಚೇರಿಗೆ ಸ್ಥಳೀಯರು ಗುರುವಾರ ಮುತ್ತಿಗೆ ಹಾಕಿದರು.
Published on

ಹನುಮಸಾಗರ: ಗ್ರಾಮದಲ್ಲಿ ಜಲಜೀವನ್ ಮಿಷನ್ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸುವಂತೆ ಆಗ್ರಹಿಸಿ ಸ್ಥಳೀಯರು ಗುರುವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮದ ವಿವಿಧ ವಾರ್ಡ್‌ಗಳಲ್ಲಿ ಕೋಟ್ಯಂತರ ರೂ. ಅನುದಾನದಲ್ಲಿ ಮನೆ ಮನೆಗೆ ಶುದ್ಧ ಕುಡಿವ ನೀರು ಪೂರೈಸಲು ಜೆಜೆಎಂ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಎರಡು ವರ್ಷಗಳಿಂದ ಕುಂಟುತ್ತ ಸಾಗಿದ್ದು, ಈವರೆಗೆ ನೀರುನ ಪೂರೈಕೆ ಆಗುತ್ತಿಲ್ಲ. ಗುತ್ತಿಗೆದಾರರು ಎರಡು ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ಕುರಿತು ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೈಪ್‌ಲೈನ್ ಜೋಡಣೆಗೆ ತೆಗೆದ ತಗ್ಗುಗಳು ಹಾಗೆ ಇರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಹನುಮಂತಪ್ಪ ಹಲಕೂಲಿ, ಮಲ್ಲಪ್ಪ ಬಾದಾಮಿ, ಚಂದಪ್ಪ ಗುಡಲದಿನ್ನಿ, ಚಂದಪ್ಪ, ಮಹಾಂತಪ್ಪ ಕೋಳೂರು, ಹುಲ್ಲಪ್ಪ ಗಡೇಕಾರ, ಚಂದಪ್ಪ ಬಳೂಟಗಿ, ಶರಣಪ್ಪ ಗಡೇಕಾರ ಇತರರಿದ್ದರು.

ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಗುತ್ತಿಗೆದಾರರ ಜತೆ ಚರ್ಚಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರನ್ನು ಕರೆಸಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ ಮೇಲಧಿಕಾರಿಗಳಿಗೆ ತಿಳಿಸುವುದಾಗಿ ಎಚ್ಚರಿಸಲಾಗಿದೆ.| ನಿಂಗಪ್ಪ ಮೂಲಿಮನಿ, ಪಿಡಿಒ, ಹನುಮಸಾಗರ ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net