ಸಸಿ ವಿಸರ್ಜಿಸಿ ದಸರಾ ಹಬ್ಬಕ್ಕೆ ತೆರೆ

SASI VITARANE
ಹನುಮಸಾಗರದ ಹೊರವಲಯದ ಹಳ್ಳದ ಗಂಗಾದೇವಿಗೆ ಎಸ್‌ಎಸ್‌ಕೆ ಸಮುದಯದವರು ಸಾಮೂಹಿಕವಾಗಿ ಸಸಿ ಅರ್ಪಿಸಿದರು. ದೇವಸ್ಥಾನದ ಅರ್ಚಕ ತಿಪ್ಪಣಸಾ ಬಸೂದೆ, ವೀಣಾಕಾರ ಗೋಪಿನಾಥ ಪಾಟೀಲ್, ಗಣಪತಿ ಅಶೋಕಸಾ ಮೆಹರವಾಡೆ, ನಾರಾಯಣಸಾ ರಾಯಬಾಗಿ, ಪ್ರಲ್ಹಾದ ಬಸೂದೆ, ಅಂಬಾಸ ಹುಬ್ಬಳಿ, ಕಿರಣಸಾ ಪವಾರ, ಅಂಬಾಸಾ ತುಳಸಿಕಟ್ಟಿ, ಯಲ್ಲುಸಾ ಕಾಟವಾ, ಗಣಪತಿಸಾ ಮೆಹರವಾಡೆ, ಪರಶುರಾಮ ಪಾಟೀಲ್, ಅಂಬಾಸ ಪಾಟೀಲ್ ಇತರರಿದ್ದರು
Published on

ಹನುಮಸಾಗರ: ಪಟ್ಟಣದ ಹೊರವಲಯದ ಹಳ್ಳದಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್‌ಎಸ್‌ಕೆ) ಸಮುದಾಯದವರು ಸಾಮೂಹಿಕವಾಗಿ ಸಸಿ ಬಿಡುವ ಮೂಲಕ ದಸರಾಕ್ಕೆ ಭಾನುವಾರ ತೆರೆ ಎಳೆದರು.

ಮಹಿಳೆಯರು ಗಂಗಾ ಪೂಜೆ ನೆರವೇರಿಸಿ ನವರಾತ್ರಿ ಉತ್ಸವದಲ್ಲಿ ಮನೆಯಲ್ಲಿ ಹಾಕಿದ್ದ ವಿವಿಧ ಸಸಿಗಳನ್ನು ಸಮುದಾಯದವರು ಹಳ್ಳಕ್ಕೆ ತಂದು ಗಂಗೆಗೆ ಸಮರ್ಪಿಸಿ ಬಾಗಿನ ಹಾಗೂ ನೈವೇದ್ಯ ಅರ್ಪಿಸಿದರು. ಪ್ರತಿ ವರ್ಷ ಒಂಬತ್ತು ದಿನ ಸಸಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ದೇವಸ್ಥಾನದ ಅರ್ಚಕ ತಿಪ್ಪಣಸಾ ಬಸೂದೆ, ಪ್ರಮುಖರಾದ ವೀಣಾಕಾರ ಗೋಪಿನಾಥ ಪಾಟೀಲ್, ಗಣಪತಿ ಅಶೋಕಸಾ ಮೆಹರವಾಡೆ, ನಾರಾಯಣಸಾ ರಾಯಬಾಗಿ, ಪ್ರಲ್ಹಾದ ಬಸೂದೆ, ಅಂಬಾಸ ಹುಬ್ಬಳ್ಳಿ, ಕಿರಣಸಾ ಪವಾರ, ಅಂಬಾಸಾ ತುಳಸಿಕಟ್ಟಿ, ಯಲ್ಲುಸಾ ಕಾಟವಾ, ಗಣಪತಿಸಾ ಮೆಹರವಾಡೆ, ಪರಶುರಾಮ ಪಾಟೀಲ್, ಅಂಬಾಸ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net