ನಾಡಿಗೆ ಅಪಾರ ಕೊಡುಗೆ ನೀಡಿದ ಶಿವಕುಮಾರ ಸ್ವಾಮೀಜಿ: ಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು ಹೇಳಿಕೆ

210123 Hanumasagara Commemoration of Shri Shivakumar Swamiji
ಹನುಮಸಾಗರದಲ್ಲಿ ಶನಿವಾರ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಮಾಡಲಾಯಿತು.
Published on

ಹನುಮಸಾಗರ: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಬಡ ಮಕ್ಕಳ ಪಾಲಿಗೆ ಆಶಾದೀಪವಾಗಿದ್ದರು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು ಹೇಳಿದರು.

ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಡುಕಂಡ ಶ್ರೇಷ್ಠ ಸ್ವಾಮೀಜಿ. ಅನೇಕ ಮಕ್ಕಳಿಗೆ ಅನ್ನ, ವಸ್ತ್ರ, ವಿದ್ಯೆ ದಾನ ಮಾಡಿ ಆಸರೆಯಾಗಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅವರು, ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಮೀಜಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು. ಗ್ರಾಪಂ ಸದಸ್ಯರಾದ ಶಿವಪ್ಪ ಕಂಪ್ಲಿ, ರುದ್ರಗೌಡ ಗೌಡಪ್ಪನವರ, ಬಸವರಾಜ ದ್ಯಾವಣ್ಣನವರ, ಚಂದ್ರು ಬೆಳಗಲ್, ಮುಖಂಡರಾದ ಮಲ್ಲಯ್ಯ ಕೋಮಾರಿ, ಶಂಕ್ರಪ್ಪ ಸಪ್ಪಂಡಿ, ಮಹಾಂತಯ್ಯ ಕೋಮಾರಿ, ವಿಶ್ವನಾಥ ನಾಗುರ, ಬಸವರಾಜ ಚಿನಿವಾಲರ, ಬಾಳಪ್ಪ ಪತ್ತಾರ, ಬಸವರಾಜ ಹೊಸಂಗಡಿ, ವೆಂಕಟೇಶ್ ಗುಡ್ಕೋಟಿ, ಶ್ರೀಶೈಲ ಪವಾಡ ಶೆಟ್ಟರ್, ವೀರಣ್ಣ ಹುನಗುಂಡಿ, ಅಮರೇಶ ಕುರ್ನಾಳ, ರಮೇಶ್ ನಿಡಗುಂದಿ ವೀರೇಶ ನಿರ್ವಾಣಿ, ಸಂಗಮೇಶ ನಾಲವಾಡ, ವೀರಣ್ಣ ಹಳ್ಳಿಗುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net