ಗೌರಮ್ಮಗೆ ಸಕ್ಕರೆ ಆರತಿ ಪೂಜೆ

081122 Hanumasagara Gouri Habba Suger Aarathi
ಹನುಮಸಾಗರದ ವಿದ್ಯಾನಗರದ ಮನೆಯೊಂದರಲ್ಲಿ ಮಂಗಳವಾರ ಸಕ್ಕರೆ ಆರತಿಯಿಂದ ಗೌರಮ್ಮನಿಗೆ ಪೂಜೆ ಮಾಡಿದ ಮಹಿಳೆಯರು.
Published on

ಹನುಮಸಾಗರ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಗೌರಿ ಹುಣ್ಣಿಮೆ ನಿಮಿತ್ತ ಸೋಮವಾರ, ಮಂಗಳವಾರ ಮಹಿಳೆಯರು ಗೌರಮ್ಮಗೆ ಸಕ್ಕರೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಗ್ರಾಮೀಣ ಭಾಗದಲ್ಲಿ ಮಹಿಳೆಯರು, ಯುವತಿಯರು ಸಕ್ಕರೆ ಆರತಿಯೊಂದಿಗೆ ಪ್ರತಿಷ್ಠಾಪಿಸಿರುವ ಗೌರಮ್ಮನ ಮನೆಗಳಿಗೆ ತೆರಳಿ ಆರತಿ ಮಾಡಿದರು. ಕಳೆದ ವರ್ಷಕ್ಕಿಂತ ಈ ವರ್ಷ ಸಕ್ಕರೆ ಆರತಿ ಬೆಲೆ ಹೆಚ್ಚಾಗಿತ್ತು. ಕಳೆದ ವರ್ಷ 80 ರೂ.ಗೆ ಮಾರಾಟವಾಗಿದ್ದ ಆರತಿ ಈ ವರ್ಷ 100 ರೂ.ಗೆ ಮಾರಾಟವಾಯಿತು. ಮಕ್ಕಳು ಬಗೆ ಬಗೆಯ ಬಟ್ಟೆಗಳನ್ನು ತೊಟ್ಟು, ಹೂವು ಮುಡಿಗಿಟ್ಟು ಆರತಿ ಬೆಳಗಲು ತೆರಳುತ್ತಿರುವ ದೃಶ್ಯ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net