11 ವರ್ಷಗಳ ಬಳಿಕ ತುಂಬಿದ ಕೆರೆಗೆ ಬಾಗಿನ ಸಮರ್ಪಿಸಿದ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ

201020 Hanumasagara Lake Bhagina Aprane
ಹನುಮಸಾಗರದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬೆಟ್ಟದ ಹತ್ತಿರದ ಕೆರೆಗೆ ಮಂಗಳವಾರ ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಬಾಗಿನ ಸಮರ್ಪಿಸಿದರು.
Published on

ಹನುಮಸಾಗರ: ಕೆರೆ ತುಂಬಿದ್ದರಿಂದ ಈ ವರ್ಷ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಬೆಟ್ಟದ ಹತ್ತಿರದ ಕೆರೆಗೆ ಮಂಗಳವಾರ ಬಾಗಿನ ಸಮರ್ಪಿಸಿ ಮಾತನಾಡಿದರು. ಈ ವರ್ಷ ಉತ್ತಮವಾಗಿ ಮಳೆಯಾಗಿದ್ದರಿಂದ 11 ವರ್ಷಗಳ ಬಳಿಕ ಕೆರೆ ತುಂಬಿದೆ. ಸಾರ್ವಜನಿಕರು ಕೆರೆಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನರೇಗಾ ಯೋಜನೆಯಡಿ ಕೆರೆ ಹೂಳೆತ್ತಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ಐದಾರು ವರ್ಷಗಳಿಂದ ಉಂಟಾಗಿದ್ದ ನೀರಿನ ಸಮಸ್ಯೆ ಕಡಿಮೆಯಾಗಲಿದೆ ಎಂದರು.

ಗ್ರಾಪಂ ಮತ್ತು ಸ್ಥಳೀಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕೆರೆಗೆ ಬಾಗಿನ ಸಮರ್ಪಿಸಲಾಯಿತು. ಪಿಡಿಒ ನಿಂಗಪ್ಪ ಮೂಲಿಮನಿ, ಗ್ರಾಪಂ ಸದಸ್ಯರು, ರೈತಸಂಘದ ಪದಾಧಿಕಾರಿಗಳು, ಗ್ರಾಪಂ ಸದಸ್ಯರು, ಮುಖಂಡರು, ಯುಕರು ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net