ಭಗತ್ ಸಿಂಗ್ ಆದರ್ಶ ಅಳವಡಿಸಿಕೊಳ್ಳಿ

000
Published on

ಹನುಮಸಾಗರ: ಯುವಕರು ಭಗತ್ ಸಿಂಗ್ ಅವರಂತೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಪೂರ ಹೇಳಿದರು.

ಪಟ್ಟಣದ ಭಗತ್ ಸಿಂಗ್ ಸರ್ಕಲ್‌ನಲ್ಲಿ ಗುರುವಾರ ಭಗತ್ ಸಿಂಗ್ ಸಂಘ ಪುಣ್ಯತಿಥಿ ನಿಮಿತ್ತ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಹುಟ್ಟಿದ ನೆಲದ ಬಗ್ಗೆ ಹೆಮ್ಮೆ ಇರಬೇಕು. ಭಗತ್ ಸಿಂಗ್ ಇಂದಿನ ಅನೇಕ ಯುವಕರಿಗೆ ಪ್ರೇರಣಾದಾಯಕವಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವಕರು ದುಶ್ಚಟಗಳಿಗೆ ದಾಸರಾಗದೆ ಉತ್ತಮ ಶಿಕ್ಷಣ ಪಡೆದು ಮಾದರಿ ವ್ಯಕ್ತಿಗಳಾಗಿ ಬೆಳೆಯಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಹುಲ್ಲೂರು, ಭಗತ್ ಸಿಂಗ್ ಸಂಘದ ಸ್ಥಳೀಯ ಅಧ್ಯಕ್ಷ ಬಸವರಾಜ ಅಪ್ಪಣ್ಣವರ, ಉಪಾಧ್ಯಕ್ಷರಾದ ಬಸವರಾಜ ಹುಲ್ಲೂರ, ಕಾರ್ಯದರ್ಶಿ ವೀರೇಶ ಕೊಪ್ಪಳ, ಗ್ರಾಪಂ ಸದಸ್ಯರಾದ ಡಾ. ಬಸವರಾಜ ಹಕ್ಕಿ, ರಮೇಶ ಬಡಿಗೇರ, ಚಂದ್ರು ಬೆಳಗಲ್, ಮುಖಂಡರಾದ ಸೋಮಣ್ಣ ಹೊಸಮನಿ, ಯಲ್ಲಪ್ಪ ಮಿಶ್ರೀಕೊಟಿ, ಮಂಜುನಾಥ ಕೊಪ್ಪಳ, ಮಹಾಂತೇಶ ಕುಷ್ಟಗಿ, ಸಂಘದ ಸದಸ್ಯರಾದ ಭೀಮೇಶ ಮೂಲಿಮನಿ, ಹನುಮಂತ ಕೊಪ್ಪಳ, ನಾಗರಾಜ ಬಡಿಗೇರ, ಬಸವರಾಜ ಕವಲೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net