ನಿಗದಿತ ಅಳತೆಯಂತೆ ಕೆಲಸ ಪಡೆಯಿರಿ

meeting of Kayaka brothers
ಹನುಮಸಾಗರ ಸಮೀಪದ ಮಾಲಗಿತ್ತಿ ಗ್ರಾಪಂನಲ್ಲಿ ಪಿಡಿಒ ಚಂದಪ್ಪ ಗುಡಿಮನಿ ಕಾಯಕ ಬಂಧುಗಳ ಸಭೆ ನಡೆಸಿದರು. ಕಾಯಕ ಬಂಧುಗಳಾದ ಭಾಸ್ಕರ ಇಂಗಳದಾಳ, ಮಂಜನಾಥ, ನಿಂಗಯ್ಯ ಜಂತಕಲ್‌ಮಠ, ಬಸವರಾಜ ಬೇನಾಳ, ಹನುಮಂತ ಬೊಮ್ಮನಾಳ ಇತರರಿದ್ದರು.
Published on

ಹನುಮಸಾಗರ: ಕಾರ್ಮಿಕರು ಕೆಲಸಕ್ಕೆ ಬಾರದಿದ್ದರೆ ಕಾಯಕ ಬಂಧುಗಳು ಅವರ ಹಾಜರಾತಿ ಗೈರು ಹಾಕಬೇಕು ಎಂದು ಪಿಡಿಒ ಚಂದಪ್ಪ ಗುಡಿಮನಿ ಹೇಳಿದರು.

ಸಮೀಪದ ಮಾಲಗಿತ್ತಿ ಗ್ರಾಪಂ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ಕಾಯಕ ಬಂಧುಗಳ ಸಭೆಯಲ್ಲಿ ಮಾತನಾಡಿದರು.

ನರೇಗಾ ಕೆಲಸಕ್ಕೆ ಬಾರದ ಕಾರ್ಮಿಕರ ಹಾಜರಿ ಹಾಕಬಾರದು. ಒಬ್ಬ ಕಾಯಕ ಬಂಧುವಿಗೆ 45 ಕೂಲಿಕಾರ್ಮಿಕರನ್ನು ಒಪ್ಪಿಸಲಾಗಿದೆ. ನಿಗದಿ ಪಡಿಸಿದ ಅಳತೆಯಂತೆ ಕೂಲಿಕಾರ್ಮಿಕರಿಂದ ಕೆಲಸ ಪಡೆಯಬೇಕು. ತಾಯಂದಿರು ಸಣ್ಣ ಮಕ್ಕಳನ್ನು ಕೆಲಸದ ಸ್ಥಳದಲ್ಲಿ ಕರೆದುಕೊಂಡು ಬಾರದಂತೆ ತಿಳಿಸಬೇಕು.

ಆ ಮಕ್ಕಳಿಗೆ ಕೂಸಿನ ಮನೆಯ ಸೌಲಭ್ಯದ ಬಗ್ಗೆ ಹೇಳಿ, ಅಲ್ಲಿ ಬಿಟ್ಟು ಬರುವಂತೆ ಹೇಳಬೇಕು. ಸ್ಥಳ ಪರಿಶೀಲನೆಗೆ ಬರುವ ಜಿಕೆಎಂ, ಬಿಎಫ್‌ಟಿ ಹಾಗೂ ಟಿಎಇ ಅವರಿಗೆ ಕೆಲಸದ ಸ್ಥಳದಲ್ಲಿ ಸಹಕಾರ ನೀಡಬೇಕು. ಹೊಸ ಉದ್ಯೋಗ ಚೀಟಿ ಮಾಡಿಸುವವರಿಗೆ ಅಗತ್ಯ ದಾಖಲೆಗಳನ್ನು ಗ್ರಾಪಂಗೆ ನೀಡುವಂತೆ ಸೂಚಿಸಬೇಕು ಎಂದರು.

ಕಾಯಕ ಬಂಧುಗಳಾದ ಮಲ್ಲಪ್ಪ ರಾಜೂರ, ರಮೇಶ ಓಲೇಕಾರ, ಶರಣಪ್ಪ ದಂಡಿನ, ಮಂಜುನಾಥ ಗಾಂಜಿ, ಗಂಗಮ್ಮ ಗುಡೂರ, ಸಂತೋಷ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net