ಸಮಾಜದ ಏಳಿಗೆಗಾಗಿ ಶ್ರಮಿಸಿದರು

jaga jeevan
ಹನುಮಸಾಗರದ ಗ್ರಾಪಂನಲ್ಲಿ ಬಾಬು ಜಗಜೀವನ ರಾಮ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ ಪೂಜೆ ಸಲ್ಲಿಸಿದರು. ಪಿಡಿಒ ದೇವೇಂದ್ರಪ್ಪ ಕಮತರ, ಗ್ರಾಪಂ ಸದಸ್ಯರಾದ ಸಂಗಮೇಶ ಕರಂಡಿ, ಶಿವಪ್ಪ ಕಂಪ್ಲಿ ಇತರರಿದ್ದರು.
Published on

ಹನುಮಸಾಗರ: ಬಾಬು ಜಗಜೀವನ ರಾಮ್ ಕಡುಬಡತನದಲ್ಲಿ ಶಿಕ್ಷಣ ಮುಗಿಸಿ, ದೇಶದ ರೈಲ್ವೆ, ಸಮಾಜ ಕಲ್ಯಾಣ, ಕೃಷಿ ಮಂತ್ರಿ, ಉಪ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ನಿರ್ವಾಣಿ ಹೇಳಿದರು.

ಪಟ್ಟಣದ ಗ್ರಾಪಂ ಕಾರ್ಯಾಲಯದಲ್ಲಿ ಬುಧವಾರ ಬಾಬು ಜಗಜೀವನರಾಮ್ ಜಯಂತಿ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಬು ಜಗಜೀವನ ರಾಮ್ ಅತ್ಯಂತ ಸರಳ ಜೀವಿಯಾಗಿದ್ದು, ತಮ್ಮ ಜೀವನ ಉದ್ದಕ್ಕೂ ಸಮಾಜದ ಏಳಿಗೆಗಾಗಿ ಶ್ರಮಿಸಿ, ದೇಶದ ಬಡಜನರ ಹಸಿವು ನೀಗಿಸುವ ಕಾರ್ಯ ಮಾಡಿದ್ದಾರೆ. ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪಿಡಿಒ ದೇವೇಂದ್ರಪ್ಪ ಕಮತರ, ಗ್ರಾಪಂ ಸದಸ್ಯರಾದ ಸಂಗಮೇಶ ಕರಂಡಿ, ಶಿವಪ್ಪ ಕಂಪ್ಲಿ, ಪ್ರಮುಖರಾದ ಸೋಮಪ್ಪ, ತಿಮ್ಮನಗೌಡ ಪೊಲೀಸ್‌ಪಾಟೀಲ, ಶಿವಪ್ಪ ಹುಲ್ಲೂರ, ಬಿಎಫ್‌ಟಿ ಮಾರುತಿ ಸಾಳುಂಕಿ, ಸಿಬ್ಬಂದಿ ಮಹಾಂತಯ್ಯ ಕೋಮಾರಿ, ಹನುಮೇಶ ನರೇಗಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net