ಸರ್ಕಾರದ ಯೋಜನೆಗಳು ಸದ್ಬಳಕೆಯಾಗಲಿ

Women's Day
ಮಿಯ್ಯಪೂರ ಸಹಿಪ್ರಾ ಶಾಲೆಯಲ್ಲಿ ಮಹಿಳಾ ದಿನ ಆಚರಿಸಲಾಯಿತು. ಕುಷ್ಟಗಿ ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಮೇಘಾ ದೇಸಾಯಿ, ಹಿರಿಯ ಶಿಕ್ಷಕಿ ಶಾಂತಾಬಾಯಿ ಪಟ್ಟಣಶೆಟ್ಟಿ, ಮುಖ್ಯಶಿಕ್ಷಕ ಖಾಜಾಹುಸೇನ ಒಂಟೆಳಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವಂದನಾ ಗೊಗಿ, ಶಿಕ್ಷಕರಾದ ನಾಗನಗೌಡ ಪೊಲೀಸ್ ಪಾಟೀಲ್, ಶಾಂತಬಾಯಿ ಪಟ್ಟಣಶೆಟ್ಟಿ, ಪರಶುರಾಮಪ್ಪ ನಾಗಣ್ಣನವರ, ಲಕ್ಷ್ಮೀ ವಾಲಿಕಾರ, ಸುಜಾತಾ ಚಂದಪ್ಪ ಗುಡಗಲದಿನ್ನಿ, ಸುಮಂಗಲಾ ಕುದರಿ ಹಾಗೂ ವಿದ್ಯಾರ್ಥಿಗಳಿದ್ದರು.
Published on

ಹನುಮಸಾಗರ: ಅನೇಕ ಮಹಿಳೆಯರು ತಮಗೆ ಎದುರಾದ ಸಂಕಷ್ಟಗಳನ್ನು ಎದುರಿಸಿ ಸ್ವಾವಲಂಬಿ ಜೀವನ ನಡೆಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಕುಷ್ಟಗಿ ಇನ್ನರ್ ವ್ಹೀಲ್‌ಕ್ಲಬ್ ಕಾರ್ಯದರ್ಶಿ ಮೇಘಾ ದೇಸಾಯಿ ಹೇಳಿದರು.

ಸಮೀಪದ ಮಿಯ್ಯಪುರ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರಿಗೆ ಅಮ್ಮನೆ ಆದರ್ಶ. ತಾಯಿಯ ಮಮತೆ, ತ್ಯಾಗ, ಮಾರ್ಗದರ್ಶನ ಮರೆಯುವಂತಿಲ್ಲ. ದೇಶದ ಅಭಿವೃದ್ಧಿಗೆ ಮಹಿಳೆಯರು ನೀಡಿದ ಕೊಡುಗೆಗಳನ್ನು ಸ್ಮರಿಸಬೇಕು. ಸರ್ಕಾರಗಳು ಮಹಿಳೆಯರ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಸಮಾನತೆ ಒಂದು. ಇದನ್ನು ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂದರು.

ಮುಖ್ಯಶಿಕ್ಷಕ ಖಾಜಾಹುಸೇನ ಒಂಟೆಳಿ ಮಾತನಾಡಿ, ದೇಶಕ್ಕೆ ಮಹಿಳೆಯರ ಕೊಡುಗೆ ಅನನ್ಯ. ವೀರ ವನಿತೆಯರ ಕೊಡುಗೆ, ಸಾಧನೆಗಳನ್ನು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಮಾಡಬೇಕು. ಮಹಿಳೆಯರು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಹಿರಿಯ ಶಿಕ್ಷಕಿ ಶಾಂತಾಬಾಯಿ ಪಟ್ಟಣಶೆಟ್ಟಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ವಂದನಾ ಗೊಗಿ, ಶಿಕ್ಷಕರಾದ ನಾಗನಗೌಡ ಪೊಲೀಸ್ ಪಾಟೀಲ್, ಶಾಂತಬಾಯಿ ಪಟ್ಟಣಶೆಟ್ಟಿ, ಪರಶುರಾಮಪ್ಪ ನಾಗಣ್ಣನವರ, ಲಕ್ಷ್ಮೀ ವಾಲಿಕಾರ, ಸುಜಾತಾ ಚಂದಪ್ಪ ಗುಡಗಲದಿನ್ನಿ, ಸುಮಂಗಲಾ ಕುದರಿ, ಅಡುಗೆ ಸಿಬ್ಬಂದಿ ಅನ್ನಪೂರ್ಣಾ ಹಿರೆಮನಿ, ರೇಣಮ್ಮ ಬೇವೂರ, ನೀಲಮ್ಮ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net