

ಹನುಮಸಾಗರ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಎನ್‌ಆರ್‌ಎಲ್‌ಎಂ ಯೋಜನೆಯ ಮೇಲ್ವಿಚಾರಕ ಮಾದೇಗೌಡ ಪೊಲೀಸ್‌ಪಾಟೀಲ್ ಹೇಳಿದರು.
ಸಮೀಪದ ಹೂಲಗೇರಾದಲ್ಲಿ ಎನ್‌ಆರ್‌ಎಲ್‌ಎಂನ ಸಂಜೀವಿನಿ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಮಾಸಿಕ ಸಂತೆಯಲ್ಲಿ ಮಾತನಾಡಿದರು.
ಆಧುನಿಕ ಯುಗದಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸ್ತ್ರೀಶಕ್ತಿ ಸಂಘಗಳು ಸಹಕಾರಿಯಾಗಿವೆ. ಜೀವನಜ್ಯೋತಿ ಸಂಜೀವಿನಿ ಮಹಿಳಾ ಸಂಘದ ಸದಸ್ಯರು ತಾವೇ ಸಿದ್ಧಪಡಿಸಿದ್ದ ತಿಂಡಿ ತಿನಿಸುಗಳು, ಊದುಬತ್ತಿ, ಸಾಬೂನು, ಬಟ್ಟೆಗಳು, ತರಕಾರಿಗಳನ್ನು ಸಂಜೀವಿನಿ ಮಾಸಿಕ ಸಂತೆಯಲ್ಲಿ ಪ್ರದರ್ಶನ ಜತೆಗೆ ಮಾರಾಟ ಮಾಡಲಾಯಿತು. ಸಂತೆಯಲ್ಲಿ 15 ಸಂಘದ ಮಹಿಳೆಯರು ಭಾಗವಹಿಸಿದ್ದು, ಅಂದಾಜು 45 ಸಾವಿರಕ್ಕೂ ಅಧಿಕ ವಹಿವಾಟು ನಡೆಸಿದ್ದಾರೆ ಎಂದರು.
ಗ್ರಾಪಂ ಸದಸ್ಯೆ ರೇಣುಕಾ ಗೌಡರ, ಕಾರ್ಯದರ್ಶಿ ಯಲ್ಲಪ್ಪ, ಗ್ರಂಥಪಾಲಕ ಚಂದಪ್ಪ ಗುಡಿಮನಿ, ಸಿಬ್ಬಂದಿ ಲಂಕೇಶ ಭಜಂತ್ರಿ, ಮಂಜು ಪೂಜಾರಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಬಸಮ್ಮ ಬೆಳ್ಳಿಹಾಳ, ಕಾರ್ಯದರ್ಶಿ ದೀಪಾ ನಾಗೂರ ಇದ್ದರು.