ತೊಂದರೆಯಾಗದಂತೆ ಕ್ರಿಯಾಯೋಜನೆ ತಯಾರಿಸಿ

GP SABHE
ಹನುಮಸಾಗರ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು. ಪಿಡಿಒ ದೇವೇಂದ್ರಪ್ಪ ಕಮತರ, ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಶಂಕರ ನಾಯಕ್, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೀರನಗೌಡ ಪಾಟೀಲ್, ಲೆಕ್ಕಿಗರಾದ ವೀರನಗೌಡ ಪಾಟೀಲ್, ಮಹಾಂತಯ್ಯ ಕೋಮಾರಿ ಇದ್ದರು.
Published on

ಹನುಮಸಾಗರ: ವಾರ್ಡ್ ಸಭೆಗಳನ್ನು ಮಾಡಿ ಜನರ ಸಮಸ್ಯೆ ಆಲಿಸಿದ ನಂತರ ನರೇಗಾ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆ ಅಧಿಕಾರಿ ಶಂಕರ ನಾಯಕ್ ಹೇಳಿದರು.

ಇಲ್ಲಿನ ಗ್ರಾಪಂ ಕಾರ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. 2024-25ನೇ ಸಾಲಿನ ನರೇಗಾ ಕ್ರೀಯಾಯೋಜನೆ ಸಿದ್ಧಗೊಳ್ಳಬೇಕಾದರೆ ಮೊದಲು ಘನತ್ಯಾಜ್ಯ ವಿಲೇವಾರಿ ಘಟಕ, ಕೂಸಿನ ಮನೆ, ಗ್ರಂಥಾಲಯ ಸಿದ್ಧಗೊಳಿಸಬೇಕು. ಈ ಕಾಮಗಾರಿಗಳಿಗೆ ತೊಂದರೆಯಾಗದಂತೆ ನರೇಗಾ ಕ್ರೀಯಾಯೋಜನೆ ಸಿದ್ಧಪಡಿಸಬೇಕು. ಇನ್ನು ಮುಂದೆ ಆನ್‌ಲೈನ್ ಮೂಲಕ ಕ್ರಿಯಾಯೋಜನೆಗೆ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ ಮಾತನಾಡಿ, 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 68.95 ಲಕ್ಷ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಇದನ್ನು ವಾರ್ಡ್ ಪ್ರಕಾರ ಕಾಮಗಾರಿಗಳಿಗೆ ಬಳಕೆ ಮಾಡಲಾಗುವುದು ಎಂದರು.

ಪಿಡಿಒ ಜತೆ ವಾಗ್ವಾದ: ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸಭೆ ಕೊರಂ ಕೊರತೆಯಿಂದ ಮಧ್ಯಾಹ್ನ 1ರ ನಂತರ ಪ್ರಾರಂಭವಾಯಿತು. 38 ಸದಸ್ಯರಿರುವ ಗ್ರಾಪಂನಲ್ಲಿ ಸಭೆಯ ಕೊರಂ ಭರ್ತಿಯಾಗಬೇಕಾದರೆ 20 ಸದಸ್ಯರು ಹಾರಿರಬೇಕು. ಆದರೆ, ಬೆಳಗ್ಗೆ ಪುರುಷ ಸದಸ್ಯರು ಬೆರಳೆಣಿಕೆಯಷ್ಟು ಬಂದಿದ್ದರಿಂದ ಕಾಯ್ದು ಕಳಿತಿದ್ದ ಸದಸ್ಯೆಯರು, ಸಭೆ ಯಾವಾಗ ಪ್ರಾರಂಭ ಮಾಡುತ್ತೀರಿ? ಮನೆಯಲ್ಲಿ ಕೆಲಸ ಮತ್ತು ಸಣ್ಣ ಮಕ್ಕಳನ್ನು ಬಿಟ್ಟು ಬಂದಿದ್ದೇವೆ ಎಂದು ಪಿಡಿಒ ದೇವೇಂದ್ರಪ್ಪ ಕಮತರ ಜತೆ ವಾಗ್ವಾದಕ್ಕಿಳಿದರು. ಮಧ್ಯಾಹ್ನ ಕೊರಂ ಭರ್ತಿಯಾದ ನಂತರ ಸಭೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net