ವಾತ್ಸಲ್ಯ ಯೋಜನೆಯಡಿ ವಿವಿಧ ಸೌಲಭ್ಯ ಲಭ್ಯ

MASASHANA
ಹನುಮಸಾಗರದ ವಿದ್ಯಾರ್ಥಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ 1000 ರೂ. ಮಾಸಾಶನ ಮಂಜೂರು ಪತ್ರ ನೀಡಲಾಯಿತು. ತಾಲೂಕು ಯೋಜನಾಧಿಕಾರಿ ಶೇಖರನಾಯ್ಕ, ಸಮನ್ವಯಾಧಿಕಾರಿ ಶಿವಲೀಲಾ ಬೆಳ್ಳೇರಿಮಠ ಇತರರಿದ್ದರು.
Published on

ಹನುಮಸಾಗರ: ವಾತ್ಸಲ್ಯ ಯೋಜನೆಯಡಿ ನಿರ್ಗತಿಕ, ಅನಾಥ ಮಕ್ಕಳು ಹಾಗೂ ವೃದ್ಧರಿಗೆ ಮಾಸಾಶನ ಸೇರಿ ವಿವಿಧ ಸೌಲಭ್ಯ ನೀಡಲಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶೇಖರ ನಾಯಕ್ ಹೇಳಿದರು.

ಪಟ್ಟಣದ 3ನೇ ವಾರ್ಡ್‌ನ ಅನಾಥನಾದ ವಿನಾಯಕ ಬಸವರಾಜ ಗುಡ್ಡದವಾರಿ ಎನ್ನುವ ವಿದ್ಯಾರ್ಥಿಗೆ ವಾತ್ಸಲ್ಯ ಯೋಜನೆಯಡಿ ಮಂಜೂರು ಮಾಡಿದ ಮಾಸಾಶನ ಆದೇಶ ಪತ್ರ ಶುಕ್ರವಾರ ವಿತರಿಸಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ನಿರ್ಗತಿಕರಿಗೆ ವಸ್ತ್ರ, ಆಹಾರ, ಮನೆ ಕಟ್ಟಿಸಿಕೊಡುವುದು ಸೇರಿ ಅನೇಕ ರೀತಿಯಲ್ಲಿ ಸಹಕಾರ ಮಾಡಲಾಗುತ್ತಿದೆ. ಕೂಲಂಕಷವಾಗಿ ಪರಿಶೀಲಿಸಿ ಯೋಗ್ಯ ವ್ಯಕ್ತಿಗೆ ಈ ಯೋಜನೆ ತಲುಪಿಸಲಾಗುವುದು. ಈ ವಿದ್ಯಾರ್ಥಿಗೆ ಬೆಂಕಿ ಅಪಘಾತದಲ್ಲಿ ಪಾದಗಳು ಸಂಪೂರ್ಣ ಸುಟ್ಟು ಹೋಗಿವೆ. ಅಂಗವಿಕಲನಾಗಿದ್ದರೂ ಶಾಲೆಗೆ ಹೋಗುತ್ತಿದ್ದು, 10ನೇ ತರಗತಿ ಓದುತ್ತಿದ್ದಾನೆ. ಮಾಸಾಶನ ಅವನಿಗೆ ಸಹಾಯಕವಾಗಲಿದೆ ಎಂದರು.

ಗ್ರಾಪಂ ಉಪಾಧ್ಯಕ್ಷೆ ಹನುಮವ್ವ ಕಂದಗಲ್, ಜೆವಿಕೆ ಸಮನ್ವಯಾಧಿಕಾರಿ ಶಿವಲೀಲಾ ಬೆಳ್ಳೇರಿಮಠ, ಪ್ರಮುಖರಾದ ಶ್ರೀನಿವಾಸ ಜಹಗೀರದಾರ, ನಾಗರಾಜ ಕಂದಗಲ್, ಶ್ರೀಕಾಂತ ಕಂದಗಲ್, ವಲಯ ಮೇಲ್ವಿಚಾರಕ ನಾಗೇಶ, ಒಕ್ಕೂಟದ ಅಧ್ಯಕ್ಷೆ ಸುನಿತಾ ಕೋಮಾರಿ, ಸೇವಾ ಪ್ರತಿನಿಧಿ ಶ್ವೇತಾ ಪೂಜಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net