ಅಗತ್ಯ ಮಾಹಿತಿ ಆ್ಯಪ್‌ನಲ್ಲಿ ದಾಖಲಿಸಿ

survey
ಹನುಮಸಾಗರದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಮಾಡಲಾಯಿತು. ಪಿಡಿಒ ನಿಂಗಪ್ಪ ಮೂಲಿಮನಿ, ಗಣತಿದಾರರಾದ ಲೆಂಕಪ್ಪ ವಾಲಿಕಾರ, ಮೈಬೂಬಸಾಬ ಕಂದಗಲ್, ಅನಿಲ್, ಶಮೀನಾ ಬೇಗಂ, ರಾಜೇಶ್ವರಿ ಇತರರಿದ್ದರು.
Published on: 

ಹನುಮಸಾಗರ: ಪ್ರತಿ ಮನೆ ಮನೆಗೂ ತೆರಳಿ ಪಡೆದ ಮಾಹಿತಿಯನ್ನು ಸಮೀಕ್ಷೆ ಆ್ಯಪ್‌ನಲ್ಲಿ ದಾಖಲು ಮಾಡಬೇಕು ಎಂದು ಪಿಡಿಒ ನಿಂಗಪ್ಪ ಮೂಲಿಮನಿ ಹೇಳಿದರು.

ಪಟ್ಟಣದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಕಾರ್ಯದ ಮೇಲ್ವಿಚಾರಣೆ ನಡೆಸಿ ಬುಧವಾರ ಮಾತನಾಡಿದರು.

ಪ್ರತಿ ಮನೆಗೆ ತೆರಳಿ ಸರಿಯಾದ ಮಾಹಿತಿ ದಾಖಲು ಮಾಡಬೇಕು. ಕುಟುಂಬದ ಎಲ್ಲ ಸದಸ್ಯರ ಪೂರ್ಣ ಮಾಹಿತಿ ಪಡೆಯಬೇಕು. ಕುಟುಂಬ ಸದಸ್ಯರ ಆಧಾರ್ ಹಾಗೂ ಪಡಿತರ ಚೀಟಿ ಪಡೆದು ಜನರ ಶೈಕ್ಷಣಿಕ ಮಟ್ಟ, ಆರ್ಥಿಕ ಸ್ಥಿತಿ, ಜಾತಿ, ಉಪಜಾತಿ, ಕೌಶಲ ಅಗತ್ಯತೆ ಮತ್ತು ಇತರ ಸಾಮಾಜಿಕ ಅಂಶ ಸೇರಿ 60 ಅಂಶಗಳನ್ನು ಆ್ಯಪ್‌ನಲ್ಲಿ ದಾಖಲು ಮಾಡಬೇಕು ಎಂದರು.