

ಹನುಮಸಾಗರ: ಪಟ್ಟಣದ ಬೆಟ್ಟದ ಮೇಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸೆ.26ರಿಂದ 30ನೇ ವರ್ಷದ ನವರಾತ್ರಿ ಮಹೋತ್ಸವ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಸುಪ್ರಭಾತ, ಭೂವರಾಹ ದೇವರ ಅರ್ಚನೆ, ಪಂಚಾಮೃತ ಅಭಿಷೇಕ, ಶ್ರೀನಿವಾಸ ಕಲ್ಯಾಣ ಪ್ರವಚನ, ಕನಕಾಭಿಷೇಕ, ಪುಷ್ಪಾರ್ಚನೆ, ಮಧ್ಯಾಹ್ನ ಮಹಾ ಮಂಗಳಾರತಿ, ನೈವೇದ್ಯ ಮತ್ತು ತೀರ್ಥ ಪ್ರಸಾದ, ಭಜನೆ, ತೊಟ್ಟಿಲೋತ್ಸವ, ಸ್ವಸ್ತಿವಾಚನ, ಮಹಾಮಂಗಳಾರತಿ ಸೇರಿ ವಿವಿಧ ಉತ್ಸವಗಳು ಜರುಗಲಿವೆ.
ಸೆ.26ರಂದು ಕಲಶ, ನಂದಾದೀಪ ಸ್ಥಾಪನೆ ಮತ್ತು ಧಾನ್ಯ ಶ್ರೀ ಲಕ್ಷ್ಮೀ ಪೂಜಾ, ಸೆ.27 ಅಂಕುರಾರ್ಪಣಾ ಧ್ವಜಾರೋಹಣ, ಸಂಜೆ ಶೇಷವಾಹನ, 28ರಂದು ಹಂಸವಾಹನ, 29ಕ್ಕೆ ಹನುಮದ್ವಾಹನ, 30ರಂದು ಕಲ್ಯಾಣೋತ್ಸವ ಹಾಗೂ ಗರುಡೋತ್ಸವ, ಅ.1ಕ್ಕೆ ಅಶ್ವವಾಹನ, 2ರಂದು ಗಜವಾಹನ ಉತ್ಸವ, 3ರಂದು ಪಲ್ಲಕ್ಕಿ ಉತ್ಸವ, 4ರ ಬೆಳಗ್ಗೆ ರಥಾಂಗ ಹೋಮ, ಸಂಜೆ 5ಕ್ಕೆ ರಥೋತ್ಸವ, 5ರಂದು ಅವಭೃತ ಸ್ನಾನ, ಶಮಿ ಪೂಜಾ, ಅ.7 ಸಂಪ್ರೋಕ್ಷಣೆ ರೂಪ ಅಭಿಷೇಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.